Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಕಾಸರಗೋಡು: ಸಮುದ್ರದಲ್ಲಿ ಮುಳುಗಿ 14 ವರ್ಷದ ಬಾಲಕ ಸಾವು

ಕಾಸರಗೋಡು: ಸಹಪಾಠಿಗಳ ಜೊತೆ ಸಮುದ್ರದಲ್ಲಿ ಸ್ನಾನಕ್ಕಿಳಿದ ಬಾಲಕ ಮುಳುಗಿ ಮೃತಪಟ್ಟ ಘಟನೆ ಕಾಞ೦ಗಾಡ್ ಬಲ್ಲ ಕಡಪ್ಪುರದಲ್ಲಿ ಏ.೮ ರ ಗುರುವಾರ ನಡೆದಿದೆ.

ವಡಗರ ಮುಕ್ ನ ಝಕರಿಯಾ ರವರ ಪುತ್ರ ಅಜ್ಮಲ್ ( 14) ಮೃತಪಟ್ಟ ಬಾಲಕ . ಈತ ಹೊಸದುರ್ಗ ಹಯರ್ ಸೆಕಂಡರಿ ಶಾಲಾ 9ನೇ ತರಗತಿ ವಿದ್ಯಾರ್ಥಿಯಾಗಿದ್ದನು

ಗುರುವಾರ ಸಂಜೆ ಅಜ್ಮಲ್ ತನ್ನ ಆರು ಮಂದಿ ಸಹಪಾಠಿಗಳ ಜೊತೆ ಸ್ನಾನಕ್ಕಿದಿದ್ದು , ಅಲೆಗಳ ಅಬ್ಬರಕ್ಕೆ ಸಿಲುಕಿ ಅಜ್ಮಲ್ ನೀರುಪಾಲಾಗಿದ್ದನು . ಸಮುದ್ರಪಾಲಾಗಿದ್ದ ಅಜ್ಮಲ್ ಗಾಗಿ ಗುರುವಾರ ಸಂಜೆಯಿಂದ ಶೋಧ ನಡೆಸಿದ್ದು , ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ.

No Comments

Leave A Comment