Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಬೆಂಕಿ ದುರಂತ ಎಚ್ಚರಿಕೆ: ಕೋಝಿಕ್ಕೋಡಿನಲ್ಲಿ ತುರ್ತು ಲ್ಯಾಂಡಿಂಗ್ ಆದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ

ಕೋಝಿಕ್ಕೋಡು: ಕಾರ್ಗೊ ಬೋಗಿಯಲ್ಲಿ ಬೆಂಕಿ ಅವಘಡದ ಬಗ್ಗೆ ಮುನ್ನೆಚ್ಚರಿಕೆ ಸೂಚನೆ ಬಂದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೇರಳದ ಕೋಝಿಕ್ಕೋಡಿನಲ್ಲಿ ಶುಕ್ರವಾರ ಬೆಳಗ್ಗೆ ತುರ್ತು ಲ್ಯಾಂಡಿಂಗ್ ಆಗಿದೆ.

17 ಪ್ರಯಾಣಿಕರಿದ್ದ ವಿಮಾನ ಕಲ್ಲಿಕೋಟೆಯಿಂದ ಕುವೈತ್ ಗೆ  ಹೊರಟಿತ್ತು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಕಾರ್ಗೊ ಬೋಗಿಯಲ್ಲಿ ಬೆಂಕಿ ಅವಘಡದ ಸೂಚನೆ ಪೈಲಟ್ ಗೆ ಸಿಕ್ಕಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಕೋಝಿಕ್ಕೋಡಿನಲ್ಲಿ ಇಂದು ಬೆಳಗ್ಗೆ ತುರ್ತು ಲ್ಯಾಂಡಿಂಗ್ ಆಗಿದೆ. 17 ಪ್ರಯಾಣಿಕರಿದ್ದ ವಿಮಾನ ಕಲ್ಲಿಕೋಟೆಯಿಂದ ಕುವೈತ್ ಗೆ ಹೊರಟಿತ್ತು ಎಂದು ವಕ್ತಾರರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಸಿಗಬೇಕಿದೆ.

No Comments

Leave A Comment