Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ತ್ರಾಲ್ ಎನ್ಕೌಂಟರ್: 5 ಉಗ್ರರ ಹೊಡೆದುರುಳಿಸಿದ ಸೇನೆ

ಶ್ರೀನಗರ: ಜಮ್ಮು-ಕಾಶ್ಮೀರದ ತ್ರಾಲ್ ನಲ್ಲಿ ನಡೆದಿರುವ ಎನ್ ಕೌಂಟರ್ ನಲ್ಲಿ 5 ಭಯೋತ್ಪಾದಕನನ್ನು ಭಾರತೀಯ ಸೇನಾಪಡೆ ಶುಕ್ರವಾರ ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ.

ಅವಂತಿಪೋರಾ ಜಿಲ್ಲೆಯ ತ್ರಾಲ್ ನಲ್ಲಿ ಉಗ್ರರು ಅಡಗಿಕುಳಿತಿರುವ ಮಾಹಿತಿ ತಿಳಿದುಬರುತ್ತಿದ್ದಂತೆಯೇ ಭಾರತೀಯ ಸೇನಾಪಡೆಗಳು ಕಾರ್ಯಾಚರಣೆಗಿಳಿದಿದ್ದವು. ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ ಅಡಗಿಕುಳಿತಿದ್ದ ಉಗ್ರರು ಸೇನಾಪಡೆಗಳ ಮೇಲೆ ಗುಂಡಿನ ದಾಳಿ ನಡಸಿದ್ದಾರೆ.

ಕೂಡಲೇ ಸ್ಥಳವನ್ನು ಸುತ್ತುವರೆದ ಭದ್ರತಾ ಪಡೆಗಳು ಇದೀಗ ಐವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment