BREAKING NEWS >
'ಶಾಸಕರ ಸಂಖ್ಯಾಬಲ ಯಾವ ಕ್ಷಣದಲ್ಲಿಯೂ ಬದಲಾಗಬಹುದು, ಸದನ ಪರೀಕ್ಷೆಯಲ್ಲಿ ಗೆದ್ದೇ ಗೆಲ್ಲುತ್ತೇವೆ': ಸಂಜಯ್ ರಾವತ್...ಅಸ್ಸಾಂ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರ; ನೀರಿನಲ್ಲಿ ಮುಳುಗಿದ ಸಿಲ್ಚಾರ್; ಸಾವಿನ ಸಂಖ್ಯೆ 108ಕ್ಕೆ ಏರಿಕೆ...

ಕೋವಿಡ್-19 ಸೋಂಕು: ಸೋಮವಾರದಿಂದ ತಿರುಪತಿಯಲ್ಲಿ ಸರ್ವದರ್ಶನ ಟೋಕನ್ ತಾತ್ಕಾಲಿಕ ರದ್ದು

ತಿರುಪತಿ: ಏರಿಕೆಯಾಗುತ್ತಿರುವ ಕೋವಿಡ್-19 ಪ್ರಕರಣಗಳ ಪರಿಣಾಮವಾಗಿ ತಿರುಪತಿಯಲ್ಲಿ ಸರ್ವದರ್ಶನ ಟೋಕನ್ ನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ಟಿಟಿಡಿ ನಿರ್ಧರಿಸಿದೆ.

ಏ.12 ರಿಂದ ಸರ್ವದರ್ಶನ ಟೋಕನ್ ಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ನಿರ್ಧರಿಸಲಾಗಿದ್ದು, ಭಾನುವಾರ ಸಂಜೆ ವರೆಗೆ ಮಾತ್ರ ನೀಡಲಾಗುತ್ತದೆ.

ಆಂಧ್ರಪ್ರದೇಶದಲ್ಲಿರುವ ಶ್ರೀಕ್ಷೇತ್ರ ಚಿತ್ತೂರು ಜಿಲ್ಲೆಗೆ ಸೇರಿದ್ದು, ಜಿಲ್ಲೆ ಕೋವಿಡ್-19 ಹಾಟ್ ಸ್ಪಾಟ್ ಗಳ ಪೈಕಿ ಒಂದಾಗಿದೆ. ಏ.07 ರಂದು ಚಿತ್ತೂರಿನಲ್ಲಿ 296 ಪ್ರಕರಣಗಳು ವರದಿಯಾಗಿದ್ದು, ತಿರುಪತಿ ನಗರ ಪ್ರದೇಶದಲ್ಲಿ 120 ಕೋವಿಡ್-19 ಪ್ರಕರಣಗಳು, ತಿರುಪತಿ ಗ್ರಾಮೀಣ ಪ್ರದೇಶದಲ್ಲಿ 48 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದವು. ಈ ಮೂಲಕ ಜಿಲ್ಲೆಯಲ್ಲಿ ಒಟ್ಟಾರೆ ಕೋವಿಡ್-19 ಸೋಂಕಿತರ ಸಂಖ್ಯೆ 91,000 ದಾಟಿದೆ

ಸರ್ವದರ್ಶನ ಟೋಕನ್ ಗಳಿಗಾಗಿ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಭೂದೇವಿ ಕಾಂಪ್ಲೆಕ್ಸ್, ವಿಷ್ಣು ನಿವಾಸಮ್ ನಲ್ಲಿ ಸೇರುವುದರಿಂದ ಕೋವಿಡ್-19 ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ. ಆದ್ದರಿಂದ ಟಿಟಿಡಿ ಸರ್ವದರ್ಶನ ಟೋಕನ್ ನೀಡುವುದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದು, ಪುನಃ ಪ್ರಾರಂಭವಾಗುವ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ತಿಳಿಸಿದೆ.

No Comments

Leave A Comment