Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ತ್ರಿಬಲ್ ರೈಡಿಂಗ್: ಚಂದನ್ ಶೆಟ್ಟಿ ಹಾಡಿಗೆ ಮೂವರು ನಾಯಕಿಯರೊಂದಿಗೆ ಗೋಲ್ಡನ್ ಸ್ಟಾರ್ ಹೆಜ್ಜೆ

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ತ್ರಿಬಲ್ ರೈಡಿಂಗ್, ಗಾಳಿಪಟ-2 ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯ ತ್ರಿಬಲ್ ರೈಡಿಂಗ್ ಚಿತ್ರದ ಹಾಡಿನ ಚಿತ್ರೀಕರಣ ಪ್ರಾರಂಭವಾಗಿದ್ದು, ಗಣೇಶ್ ಮೂವರು ನಾಯಕಿಯರಾದ ಕಿರುತೆರೆ ನಟಿ ಮೇಘಾ ಶೆಟ್ಟಿ, ಲವ್ ಮಾಕ್ ಟೇಲ್ ಖ್ಯಾತಿಯ ರಚನಾ ಮತ್ತು ನಟಿ ಅದಿತಿ ಪ್ರಭುದೇವ ಈ ಮೂವರು ನಾಯಕಿರ ಜೊತೆ ಹೆಜ್ಜೆ ಹಾಕುತ್ತಿದ್ದಾರೆ.

ಅದ್ದೂರಿ ಸೆಟ್ ನಲ್ಲಿ ರಿಚ್ ಆಗಿ ಮೂಡಿಬರುತ್ತಿರುವ ಹಾಡಿಗೆ ಮುರಳಿ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ವಿಭಿನ್ನ ಹಾಡಿಗೆ ಚಂದನ್ ಶೆಟ್ಟಿ ಸಾಹಿತ್ಯ ರಚಿಸಿ ಧ್ವನಿ ನೀಡಿದ್ದಾರೆ.

ಈಗಾಗಲೇ ಮಾತಿನ ಭಾಗ ಮುಗಿಸಿರುವ ಸಿನಿಮಾತಂಡ ಸದ್ಯ ಹಾಡಿನ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಲಿದೆ. ಕೊರೋನಾ ಹೆಚ್ಚಾಗುತ್ತಿರುವ ಕಾರಣ ಸಿನಿಮಾ ಬಿಡುಗಡೆ ತಡವಾಗುವ ಸಾಧ್ಯತೆ ಇದೆ.  ಕಳೆದ ವರ್ಷ ಅಕ್ಟೋಬರ್ ನಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು, ಸಿನಿಮಾ ರಿಲೀಸ್ ಡೇಟ್ ಇನ್ನೂ ನಿರ್ಧಾರ ಮಾಡಿಲ್ಲ.

ರಾಮಗೋಪಾಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ ದೊಡ್ಡ ತಾರಾಬಳಗದಲ್ಲಿ ಸಾಧುಕೋಕಿಲ, ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್, ಡಿಂಗ್ರಿ ನಾಗರಾಜ್ ಸೇರಿದಂತೆ ಹಲವು ಜನಪ್ರಿಯ ಕಲಾವಿದರಿದ್ದಾರೆ. ತ್ರಿಬಲ್ ರೈಡಿಂಗ್ ಗಣೇಶ್ ನಟನೆಯ ಈ ವರ್ಷ ಬಿಡುಗಡೆಯಾಗುವ ಮೊದಲ ಸಿನಿಮಾವಾಗಿದೆ.

No Comments

Leave A Comment