Log In
BREAKING NEWS >
ಯಶಸ್ವಿಯಾಗಿ ಮುಗಿದ ಎಸ್ಎಸ್ಎಲ್ ಸಿ ಪರೀಕ್ಷೆ: ಆಗಸ್ಟ್ 10 ರಂದು ಫಲಿತಾಂಶ.....ಆಗಸ್ಟ್‌ 29ರಂದು ಆಯೋಧ್ಯೆಯ ರಾಮ ಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ...

ಹಂಪಿ ವಿ.ವಿ.ಕುಲಪತಿ ಡಾ| ಸಾ. ಚಿ. ರಮೇಶ್, ಉಡುಪಿಯ ನೇತ್ರತಜ್ಞ ಡಾ. ಕೆ. ಕೃಷ್ಣಪ್ರಸಾದ್ ನಾಡೋಜ ಪದವಿಗೆ ಆಯ್ಕೆ

ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯ ಈ ವರ್ಷದ ನುಡಿಹಬ್ಬಕ್ಕೆ ವಿಜಯಪುರ ಜಿಲ್ಲೆ ಹೊನ್ನವಾಡ ಗ್ರಾಮದ ಉದ್ಯಮಿ ಜಗದೀಶ ಎಸ್. ಗುಡಗುಂಟಿ ಹಾಗೂ ಉಡುಪಿಯ ನೇತ್ರತಜ್ಞ ಡಾ. ಕೆ. ಕೃಷ್ಣಪ್ರಸಾದ್ ಅವರನ್ನು ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಿದೆ.

ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ ವಿ.ವಿ. ಕುಲಪತಿ ಡಾ| ಸಾ. ಚಿ. ರಮೇಶ್, ಏ. 9ರಂದು ನಡೆಯುವ ವಿ.ವಿ.ಯ 29ನೇ ನುಡಿಹಬ್ಬದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನಾಡೋಜ ಪದವಿ ಪ್ರದಾನ ಮಾಡುವರು. ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ 10 ಮಂದಿಗೆ ಡಿ.ಲಿಟ್ ಪದವಿ ಸೇರಿದಂತೆ ಎಂ.ಎ., ಪಿಎಚ್.ಡಿ., ಡಿಪ್ಲೋಮಾ ಕೋರ್ಸ್ ಪೂರೈಸಿರುವ ಒಟ್ಟು 365 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ

No Comments

Leave A Comment