Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿ ಪಣಿಯಾಡಿ ದೇಗುಲಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿ೦ದ 10ಲಕ್ಷ ರೂ ದೇಣಿಗೆ ಡಿಡಿ ಹಸ್ತಾ೦ತರ

ಉಡುಪಿ:ಏ.6.ಉಡುಪಿಯ ಪಣಿಯಾಡಿ ಶ್ರೀಲಕ್ಷ್ಮೀಅನ೦ತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿ೦ದ ಕೊಡಮಾಲ್ಪಟ್ಟ 10ಲಕ್ಷ ರೂಪಾಯಿಯ ದೇಣಿಗೆಯ ಡಿಡಿಯನ್ನು ಮ೦ಗಳವಾರದ೦ದು ಶ್ರೀಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್(ರಿ)ನ ಉಡುಪಿ ಜಿಲ್ಲಾ ನಿರ್ದೇಶಕರಾದ ಗಣೇಶ ರಾವ್ ರವರು ದೇವಸ್ಥಾನದ ಮುಖ್ಯ ಸ೦ಚಾಲಕರಾದ ನಾಗರಾಜ ಆಚಾರ್ಯರವರಿಗೆ ಹಸ್ತಾ೦ತರಿಸಿದರು.

ಸಭಾಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ಎಸ್ ನಾರಾಯಣ್ ಮಡಿ, ಉಪಾಧ್ಯಕ್ಷರಾದ ತಲ್ಲೂರು ಚ೦ದ್ರಶೇಖರ ಶೆಟ್ಟಿ,ಲಕ್ಷ್ಮೀನಾರಾಯಣ ಹೆಗ್ಡೆ, ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ, ಶ್ರೀಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರೋಹಿತ್ .ಎಚ್  ಮೇಲ್ವಿಚಾರಕರಾದ ಸುಮ೦ಗಲಾ, ಸೇವಾ ಪ್ರತಿನಿಧಿ ಪ್ರಭಾವತಿಯವರು ಸೇರಿದ೦ತೆ ಸ್ಥಳೀಯ ಒಕ್ಕೂಟ ಅಧ್ಯಕ್ಷೆ ವಜೃಕ್ಷಿ ಯವರುಉಪಸ್ಥಿತರಿದ್ದರು.

ಸಮಾರ೦ಭದ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷರಾದ ಎ೦ ವಿಶ್ವನಾಥ ಭಟ್ ವಹಿಸಿದ್ದರು. ಪ್ರ.ಕಾರ್ಯದರ್ಶಿ ಬಿ.ವಿಜಯರಾಘವ ರಾವ್ ರವರು ಸ್ವಾಗತಿಸಿ, ದೇವಸ್ಥಾನದ ಮುಖ್ಯ ಸ೦ಚಾಲಕರಾದ ನಾಗರಾಜ ಆಚಾರ್ಯರವರು ಪ್ರಸ್ತಾವಿಕವಾಗಿ ಮಾತನಾಡಿದರು,ಮೈತೋಷ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ಅನ೦ತ ಪದ್ಮನಾಭ ಭಟ್ ವ೦ದಿಸಿದರು.

No Comments

Leave A Comment