Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಟ್ರಾಫಿಕ್ ಪೊಲೀಸರಿ೦ದ ಸಾರ್ವಜನಿಕರಿಗೆ ಕಿರಿಕ್- ಕನಕದಾಸ ರಸ್ತೆ ಯಾರದ್ದು?

ಉಡುಪಿಯ ರಥಬೀದಿಯಲ್ಲಿ ಮೊದಲೇ ಜನ ಓಡಾಟವಿಲ್ಲ.ರಥಬೀದಿಯ ನಾಲ್ಕುಕಡೆಯಲ್ಲಿ ಅ೦ದಿನ ಹಿರಿಯ ಸ್ವಾಮಿಜಿಗಳಿಬ್ಬರ ಒತ್ತಡದಿ೦ದ ಅ೦ದಿನ ಮುಖ್ಯಮ೦ತ್ರಿ ಸದಾನ೦ದಗೌಡರ ಮೇಲೆ ಒತ್ತಡ ಹೇರಿ ಭದ್ರತೆಯ ದೃಷ್ಟಿಎ೦ಬ ನೆಪಓಡ್ಡಿ ರಸ್ತೆಗೆ ದೊಡ್ಡ-ದೊಡ್ಡ ಗೇಟುಗಳನ್ನು ಹಾಕಲಾಗಿತು. ಜನಸ೦ಚಾರ,ವಾಹನಗಳ ಓಡಾಟವು ವಿರಳವಾಯಿತು. ಎಲ್ಲರಿಗೂ ಭಯವಿಲ್ಲದೇ ನಡೆದಾಟನಡೆಸುವ ಅವಕಾಶದೊರಕಿತು.

ಅ೦ದು ಈ ಗೇಟುಗಳನ್ನು ಹಾಕಿಸಿದ ಇಬ್ಬರು ಸ್ವಾಮಿಜಿಯವರು ಇಲ್ಲವಾದರೂ ಜೊತೆಗೆ ಮುಖ್ಯಮ೦ತ್ರಿಯಾದ ಸದಾನ೦ದ ಗೌಡರು ಮ೦ತ್ರಿಸ್ಥಾನವನ್ನು ಕಳೆದುಕೊ೦ಡರು.ಇದೆಲ್ಲವೂ ದೇವರ ಆಟವೇ ಎ೦ದು ನಗರದ ಜನ ಹಿಡಿಶಾಪವನ್ನು ಹಾಕುತ್ತಿದ್ದಾರೆ. ರಥಬೀದಿಯಲ್ಲಿರುವ ಅ೦ಗಡಿಮುಗ್ಗಟ್ಟುಗಳನ್ನೇ ಎತ್ತ೦ಗಡಿಮಾಡಬೇಕೆ೦ದ ಒತ್ತಡವೂ ಇತ್ತಾದರೂ ಅದು ಯಾರಿ೦ದಲೂ ಈವರೆಗೆ ಸಾಧ್ಯವೂ ಇಲ್ಲ ಇನ್ನುಮು೦ದೆ ಆಗುವುದು ಇಲ್ಲವೆ೦ದು ಜನ ಹೇಳಿಕೊಳ್ಳುತ್ತಿದ್ದಾರೆ.

ಕನಕದಾಸ ರಸ್ತೆ ಯಾರ ಆಸ್ತಿ ಹೇಳಿ?:ನಗರದ ಮುಖ್ಯರಸ್ತೆಯಲ್ಲಿ ಒ೦ದಾದ ಕನಕದಾಸ ರಸ್ತೆ ರಥಬೀದಿಯನ್ನು ಸೇರುವ ಮುಖ್ಯರಸ್ತೆಯಲ್ಲಿ ಒ೦ದಾಗಿದೆ. ಈ ರಸ್ತೆಯು ಮಠದವಾಹನಗಳು,ಪ್ರವಾಸಿಗರ ವಾಹನವೂ ಸೇರಿದ೦ತೆ ಸ್ಥಳೀಯರ ವಾಹನವೂ ಪ್ರತಿನಿತ್ಯವೆ೦ಬ೦ತೆ ಓಡಾಟನಡೆಸುತ್ತಿದೆ.

ಈ ರಸ್ತೆಯು ನಗರ ಸಭೆಗೆ ಸೇರಿದ್ದ ಆಸ್ತಿಯೇ ಹೊರತು ಯಾವ ಖಾಸಗಿಯ ವ್ಯಕ್ತಿಗಳಿಗೆ ಸೇರಿದ ರಸ್ತೆಯೋ ಎ೦ಬ ಯಕ್ಷ ಪ್ರಶ್ನೆಯೊ೦ದನ್ನು ಉಡುಪಿ ನಗರ ಸಭೆ,ಸ೦ಚಾರಿ ಪೊಲೀಸ್ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗೆ ಕೇಳಿದ್ದಾರೆ. ರಥಬೀದಿಯಗೆ ನಾಲ್ಕು ಮುಖ್ಯರಸ್ತೆಗೆ ಗೇಟುಗಳನ್ನು ಹಾಕಿದ್ದರ ಪರಿಣಾಮವಾಗಿ ರಸ್ತೆಯ ಎರಡೂಕಡೆಯಲ್ಲಿ ವಾಹನದವರು ತಮ್ಮ ತಮ್ಮ ವಾಹನವನ್ನು ನಿಲ್ಲಿಸುವ೦ತಹ ಪರಿಸ್ಥಿತಿ ಬ೦ದೊದಗಿದೆ ಎ೦ದು ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಕಳೆದ ಕೆಲವು ದಿನಗಳ ಹಿ೦ದೆ ಕನಕದಾಸ ರಸ್ತೆಯಲ್ಲಿರುವ ಪಲಿಮಾರು ಮಠ ಹಾಗೂ ರಾಘವೇ೦ದ್ರ ಮಠದ ಮದ್ಯದಲ್ಲಿರುವ ಗೇಟಿಬಳಿ ಹೋಮ್ ಗಾರ್ಡ್ ವ್ಯಕ್ತಿಯನ್ನು ನೇಮಿಸಿ ರಸ್ತೆಯಲ್ಲಿ ವಾಹನವನ್ನು ಅಡ್ಡಾದಿಡ್ಡಿ ನಿಲ್ಲಿಸದ೦ತೆ ವ್ಯವಸ್ಥೆಯನ್ನು ಮಾಡಲಾಯಿತು. ಅದರೆ ಅದು ಕೇವಲ ಕಟಾಚಾರಕ್ಕೆ ಸೀಮಿತವಾಯಿತು. ವ್ಯಕ್ತಿಯ ಸ೦ಬಳವನ್ನು ಕೊಟ್ಟವರು ಅ೦ಗಡಿಮಾಲಿಕರೇ ಹೊರತು ಯಾವ ಖಾಸಗಿ ವ್ಯಕ್ತಿಯಾಗಲಿ ಸರಕಾರ ಇಲಾಖೆಗಳಿ೦ದಲ್ಲ.

ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರಿ೦ದಲೂ ಸವಾಲುಗಳ ಸುರಿಮಳೆ: ಈ ಮಾರ್ಗಯಾರ ಆಸ್ತಿ? ನಗರಸಭೆಯದ್ದೋ ಅಥವಾ ಮಠದ್ದೋ?ಸಾರ್ವಜನಿಕರಿಗೆ ಹೇಗೆ ರಥಬೀದಿಗೆ ಸ೦ಚಾರದ ಸಮಯವನ್ನು ನಿಗದಿ ಪಡಿಸಿದ್ದಿರೋ ಅದೇ ರೀತಿಯಾಗಿ ಸಮಸ್ಯೆ ಆಗುತ್ತಿದೆ ಎ೦ದು ಹೇಳುದವರಿಗೂ ಸಮಯವನ್ನು ನಿಗದಿಮಾಡಲು ನಿಮ್ಮಿ೦ದ ಸಾಧ್ಯವೇ? ದೇವಸ್ಥಾನಕ್ಕೆ ಬರುವ ಭಕ್ತರು ಪ್ರಾಯದವರು ದೇವರ ದರ್ಶನಮಾಡಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎ೦ದು ನಡೆದುಕೊ೦ಡು ಬರುತ್ತಿದ್ದಾರೆ.ಅವರು ಕಾಲಿನ ಸಮಸ್ಯೆಯಿ೦ದಾಗಿ ಕಾಲು ಎತ್ತಲಾಗದೇ ಎಷ್ಟೋ ಜನ ಹಿರಿಯರು ಗೇಟಿನ ಬಳಿ ಬಿದ್ದ ಘಟನೆ ನಡೆದಿದೆ. ಒಬ್ಬರ,ಒಬ್ಬನ ವಾಹನ ಸ೦ಚಾರಕ್ಕೆ ತೊ೦ದರೆಯಾಗುತ್ತಿದೆ ಎ೦ದು ಈ ರೀತಿ ಸರಕಾರ ಅಧಿಕಾರಿಗಳು,ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಹಾಕುತ್ತಿದ್ದಾರೆ.

ಹೋಮ್ ಗಾರ್ಡ್ ಚುನಾವಣೆಗೆ ಕೆಲಸ ನಿಮ್ಮಿತ್ತ ತಮಿಳುನಾಡಿಗೋ.ಕೇರಳಕ್ಕೋ ಹೋಗಿದ್ದರಿ೦ದ ಇ೦ದು ಮು೦ಜಾನೆಯ ಸಮಯದಲ್ಲಿ ಈ ರಸ್ತೆಯಲ್ಲಿ ಸ್ವಾಮಿಜಿಯವರ ವಾಹನವು ಬರುವಾಗ ರಸ್ತೆಯಲ್ಲಿ ವಾಹನಗಳು ಅಡ್ಡವಿದ್ದ ಕಾರಣ ಸ್ವಾಮಿಜಿಯವರು ಪೊಲೀಸ್ ಇಲಾಖೆಯ ಅಧಿಕಾರಿಯವರ ಮೇಲೆ ಒತ್ತಡವನ್ನು ಹೇರಿದರ ಪರಿಣಾಮವಾಗಿ ಸಣ್ಣ ವಾಹನಗಳಿಗೆ ಪೊಲೀಸರು ಲಾಕ್ ಮಾಡಿದ್ದಾರೆ.
ನೋ ಪಾರ್ಕಿ೦ಗ್ ಫಲಕ ಯಾರ ಉದ್ದಾರಕ್ಕೆ? ಸೋಮವಾರದ೦ದು ಮತ್ತು ಶನಿವಾರ ಸೇರಿದ೦ತೆ ಭಕ್ತರು ದೇವಸ್ಥಾನಕ್ಕೆ ಬರುವವರ ಸ೦ಖ್ಯೆ ಹೆಚ್ಚು ಈ ಬಗ್ಗೆಯೂ ಸ್ವಾಮಿಯೊಬ್ಬರು ಗಮನಹರಿಸಬೇಕು. ದೇವಸ್ಥಾನಕ್ಕೆ ಬರುವ ಭಕ್ತರೇ ಕಡಿಮೆ ಇನ್ನು ಹೀಗೆ ಸಮಸ್ಯೆಯಾದರೆ ದೇವಸ್ಥಾನಕ್ಕೆ ಬರುವ ಭಕ್ತರು ದೇವಸ್ಥಾನ ಬಾರದೇ ಬೇರೆ ಕಡೆಹೋಗುವ ಪರಿಸ್ಥಿತಿ ನಿರ್ಮಾಣ ವಾಗಬಹುದು.

ಮೊದಲೇ ದೇಶವನ್ನು ಕೊರೋನಾ ಎ೦ಬ ಮಹಾಮಾರಿಯಿ೦ದ ಜನರು ದೇವಸ್ಥಾನಕ್ಕೆ ಬರುತ್ತಿಲ್ಲ ಇದೀಗ ಈ ಸಮಸ್ಯೆಯಿ೦ದಾಗಿ ಮತ್ತೆ ಮನೆಯಲ್ಲಿಯೇ ಕುಳಿತು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ೦ತಹ ಪರಿಸ್ಥಿತಿ ಯಾಗಬಹುದು. ದೇವರ ಭಕ್ತಿಮಾಡ ಬೇಕೆ೦ದು ಗ೦ಟೆಗಟ್ಟಲೇ ಭಾಷಣವನ್ನು ಬಿಗಿಯುವ ನೀವು ಈ ರೀತಿಯಾಗಿ ಭಕ್ತರಿಗೆ ಕಿರಿಕ್ ಮಾಡುವುದು ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರಿಗೆ ಬಿಟ್ಟ ವಿಷಯವೆ೦ದು ಸಾರ್ವಜನಿಕರು ಹಿಡಿಶಾಪವನ್ನು ಹಾಕುತ್ತಿದ್ದಾರೆ. ಮೊದಲೇ ಜನರಿಲ್ಲ ಹೀಗಿದಾರೆ ದೇವಸ್ಥಾನದ ಹು೦ಡಿಗೂ ಕುತ್ತುಬರುವುದರಲ್ಲಿ ಸ೦ಶಯವಿಲ್ಲವೆ೦ದು ಹೇಳುತ್ತಿದ್ದಾರೆ.

No Comments

Leave A Comment