Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಪ್ಯಾಡೆಡ್ ಬ್ರಾ, ಮೇಕಪ್ ಇಲ್ಲದ ಸ್ವತಂತ್ರ ಜೀವನ: ವರದನಾಯಕ ನಟಿಯ ಶಾಕಿಂಗ್ ಹೇಳಿಕೆ ವಿಡಿಯೋ ವೈರಲ್

ನವದೆಹಲಿ: ಸಿನಿಮಾ ಕ್ಷೇತ್ರದ ನಟಿಯರು ಮೇಕಪ್ ಮತ್ತು ಕಾಸ್ಟ್ಯೂಮ್ ಸಲುವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಅದೇ ರೀತಿ ಬಾಲಿವುಡ್ ನಟಿ ಸಮೀರಾ ರೆಡ್ಡಿ ಸಹ ಮೇಕಪ್ ಮತ್ತು ಕಾಸ್ಟ್ಯೂಮ್ ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು ಈ ವಿಚಾರವಾಗಿ ನಟಿ ಕೆಲ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಕನ್ನಡದ ವರದನಾಯಕ ಚಿತ್ರದಲ್ಲಿ ನಟ ಸುದೀಪ್ ಗೆ ಜೋಡಿಯಾಗಿ ಸಮೀರಾ ರೆಡ್ಡಿ ಅಭಿನಯಿಸಿದ್ದರು. 2002ರಿಂದ 2013ರವರೆಗೆ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ನಟಿ 2014ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ವರದನಾಯಕ ಚಿತ್ರವೇ ಅವರ ಕೊನೆ ಚಿತ್ರವಾಗಿತ್ತು.

ಮದುವೆ ನಂತರ ವೈವಾಹಿಕ ಜೀವನದ ಕಡೆ ಹೆಚ್ಚು ಗಮನ ನೀಡುತ್ತಿರುವ ನಟಿ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ನಟಿ ತಮ್ಮ ಬದುಕಿನ ಕೆಲ ಖಾಸಗಿ ವಿಚಾರಗಳನ್ನು ಶೇರ್ ಮಾಡುತ್ತಿದ್ದಾರೆ.

ಸಮೀರಾ ರೆಡ್ಡಿ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಪ್ಯಾಡೆಡ್ ಬ್ರಾಗಳು, ಕಲರ್ಡ್ ಕಾಂಟೆಕ್ಟ್ ಲೆನ್ಸ್ ಗಳು, ಎಡಿಟ್ ಮಾಡಿದ ಫೋಟೋಗಳ ಕಾಲದಿಂದ ಈಗ ನಾನು ಸ್ವತಂತ್ರದವರಗೆ ಸಾಗಿ ಬಂದಿದ್ದೇನೆ. ನನಗೆ ಯಾವುದೇ ಒತ್ತಡವಿಲ್ಲ ಎಂದು ಬರೆದುಕೊಂಡಿದ್ದಾರೆ.

ಸೌಂದರ್ಯದ ಬಗ್ಗೆ ಇರುವ ಭ್ರಮೆಯನ್ನು ಕಳಚಿ ಹಾಕುವುದರಲ್ಲಿ ನಟಿಯ ಪ್ರಯತ್ನಗಳು ಗಮನ ಸೆಳೆಯುತ್ತಿದ್ದು ಈ ಪೋಸ್ಟ್ ಗೆ ಹಲವು ಸಕರಾತ್ಮಕ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

No Comments

Leave A Comment