ದೇಹದೊಳಗೆ ಗೌಪ್ಯವಾಗಿ ಚಿನ್ನವನ್ನು ಒಯ್ಯುತ್ತಿದ್ದ ವ್ಯಕ್ತಿ ಬಂಧನ: 802 ಗ್ರಾಂ ಚಿನ್ನ ವಶಪಡಿಸಿಕೊಂಡ ಮಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು
ಮಂಗಳೂರು: ದೇಹದೊಳಗೆ ಗೌಪ್ಯವಾಗಿ ಚಿನ್ನವನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಮಂಗಳೂರಿನ ಏರ್ ಕಸ್ಟಮ್ಸ್ ಅಧಿಕಾರಿಗಳು ಸುಮಾರು 37 ಲಕ್ಷದ 29 ಸಾವಿರ ರೂಪಾಯಿ ಮೌಲ್ಯದ 802 ಗ್ರಾಂ ಚಿನ್ನದ ಬಿಸ್ಕತ್ತನ್ನು ವಶಪಡಿಸಿಕೊಂಡಿದ್ದಾರೆ.
ಏರ್ ಕಸ್ಟಮ್ಸ್ ಅಧಿಕಾರಿಗಳು ಆಭರಣವನ್ನು ವಶಪಡಿಸಿಕೊಂಡು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಲಗ್ಗೇಜುಗಳೊಂದಿಗೆ ಆಗಮಿಸಿದ ವ್ಯಕ್ತಿಯಲ್ಲಿ ಸಂಶಯ ಬಂದು ತಪಾಸಣೆ ನಡೆಸಿದಾಗ ಆತನ ದೇಹದೊಳಗೆ ಗೌಪ್ಯವಾಗಿ ಚಿನ್ನವನ್ನು ಅಡಗಿಸಿರುವುದು ಪತ್ತೆಯಾಯಿತು. ಅದನ್ನು ಅಳತೆ ಮಾಡಿದಾಗ 802 ಗ್ರಾಂ ಚಿನ್ನವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.