Log In
BREAKING NEWS >
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ರಚನೆ: 29 ಸಚಿವರಿಂದ ಪ್ರಮಾಣ ವಚನ ಸ್ವೀಕಾರ...

ಕೊಡಗು: ಕಾನೂರು ಗ್ರಾಮದಲ್ಲಿ ಪಾನ ಮತ್ತ ವ್ಯಕ್ತಿಯಿಂದ ಮನೆಗೆ ಬೆಂಕಿ; ಆರು ಮಂದಿ ಸಜೀವ ದಹನ

ಗೋಣಿಕೊಪ್ಪ: ದಂಪತಿ ನಡುವಿನ ಕಲಹದಿಂದಾಗಿ ಆರು ಮಂದಿ ಸಜೀವ ದಹನವಾಗಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ  ಬೇಬಿ ಎಂಬುವರ ಪತಿ ಎರವರ ಬೋಜ ಎಂಬಾತ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಪಾನ ಮತ್ತನಾಗಿದ್ದ ವ್ಯಕ್ತಿ ಮನೆಯನ್ನು ಲಾಕ್ ಮಾಡಿ ಬೆಂಕಿ ಹಚ್ಚಿದ್ದಾನೆ.

ಬೇಬಿ, ಸೀತೆ,  ವಿಶ್ವಾಸ್ , ಪ್ರಾರ್ಥನಾ, ಪ್ರಕಾಶ್, ವಿಶ್ವಾಸ್ ಮೃತರಾಗಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ, ಮೂವರು ಮನೆಯಲ್ಲೇ ಸಜೀವ ದಹನವಾದರೇ ಮತ್ತೆ ಮೂವರು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಆರೋಪಿ ಪರಾರಿಯಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ  ಶೋಧ ನಡೆಸಿದ್ದಾರೆ.

No Comments

Leave A Comment