Log In
BREAKING NEWS >
ಯಶಸ್ವಿಯಾಗಿ ಮುಗಿದ ಎಸ್ಎಸ್ಎಲ್ ಸಿ ಪರೀಕ್ಷೆ: ಆಗಸ್ಟ್ 10 ರಂದು ಫಲಿತಾಂಶ.....ಆಗಸ್ಟ್‌ 29ರಂದು ಆಯೋಧ್ಯೆಯ ರಾಮ ಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ...

ಪಶ್ಚಿಮ ಬಂಗಾಳದಲ್ಲಿ 2ನೇ ಹಂತದ ಮತದಾನ, ಮುಂದುವರಿದ ಗಲಾಟೆ: ಕೇಶ್ಪುರದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ, ಬಂಧನ- ಕಾರು ಧ್ವಂಸ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದಲ್ಲಿ ಕೂಡ ಹಲವು ಮತಗಟ್ಟೆಗಳಲ್ಲಿ ಅಹಿತಕರ ವಾತಾವರಣ, ಗಲಭೆ ಮುಂದುವರಿದಿದೆ.

ದೆಬ್ರಾ ವಿಧಾನ ಪರಿಷತ್ ಚುನಾವಣಾ ಕ್ಷೇತ್ರದಲ್ಲಿ ಇಂದು ಬೆಳಗ್ಗೆ ಮತದಾನ ಆರಂಭವಾದ ಬಳಿಕ ಗಲಭೆ, ಗದ್ದಲ ಉಂಟಾಗಿದ್ದು ಬಿಜೆಪಿಯ ಮಂಡಲ ಅಧ್ಯಕ್ಷ ಮೋಹನ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಕೇಶ್ಪುರದಲ್ಲಿ ಮತಗಟ್ಟೆ ಸಂಖ್ಯೆ 173ರಲ್ಲಿ ಬಿಜೆಪಿಯ ಕಾರ್ಯಕರ್ತನ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಬಿಜೆಪಿ ನಾಯಕ ತನ್ಮಯ್ ಘೋಷ್ ಅವರ ಕಾರನ್ನು ಧ್ವಂಸ ಮಾಡಲಾಗಿದೆ.

ಮತಗಟ್ಟೆಯ ಸಮೀಪ ಭದ್ರತಾ ಪಡೆಗಳು ಇರುವಾಗಲೇ ಈ ಘಟನೆ ನಡೆದಿದೆ. ಮತದಾರರು ಈ ಘಟನೆಯನ್ನು ಖಂಡಿಸಿದ್ದು, ಪಕ್ಷಗಳು ಗೂಂಡಾಗಳನ್ನು ಹೊರಗಿನಿಂದ ಕರೆದುಕೊಂಡು ಬರುತ್ತಾರೆ. ಸ್ಥಳೀಯರಾದ ನಾವು ಏಕೆ ಗಲಭೆ ಸೃಷ್ಟಿಸಿ ಅನಿಶ್ಚಿತತೆ ಮೂಡಿಸಲಿ, ಅಭ್ಯರ್ಥಿಗಳು ಗಲಾಟೆ ಮಾಡುವವರನ್ನು ಕರೆತರುತ್ತಾರೆ, ಗಲಭೆ ಸೃಷ್ಟಿ ಮಾಡಿ ಸುದ್ದಿಯಾಗಬೇಕೆಂಬುದು ಅವರ ಆಸೆಯಾಗಿದೆ ಎಂದರು.

ಬಿಜೆಪಿಯಿಂದ ಭಾರತಿ ಘೋಷ್ ಮತ್ತು ಟಿಎಂಸಿಯಿಂದ ಹುಮಯೂನ್ ಕಬೀರ್ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಸಿಪಿಎಂ ಕಾರ್ಯಕರ್ತರ ಪ್ರತಿಭಟನೆ: ಇನ್ನೊಂದೆಡೆ ಘಟಲ್ ನಲ್ಲಿ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮತದಾನ ಮಾಡಲು ಹೋಗುತ್ತಿದ್ದ ತಮ್ಮನ್ನು ಟಿಎಂಸಿ ಕಾರ್ಯಕರ್ತರು ರಸ್ತೆತಡೆ ನಡೆಸಿ ತಡೆದಿದ್ದಾರೆ ಎಂದು ಹೇಳಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಸ್ತೆತಡೆಯನ್ನು ತೆರವುಗೊಳಿಸಿ ಮತದಾನಕ್ಕೆ ಹೋಗಲು ಅನುವು ಮಾಡಿಕೊಟ್ಟರು.

No Comments

Leave A Comment