Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಪೊಲೀಸರಿಂದ ಅಮಾನವೀಯ ಕೃತ್ಯ: ಹೆಲ್ಮೆಟ್ ಧರಿಸದ ಗರ್ಭಿಣಿಯನ್ನು 3 ಕಿ.ಮೀ ನಡೆಸಿದ ಮಹಿಳಾ ಅಧಿಕಾರಿ!

ಬರಿಪಾಡಾ: ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಗರ್ಭಿಣಿಯನ್ನು ಪೊಲೀಸರು ಬಿಸಿಲಿನಲ್ಲಿ ಬರೋಬ್ಬರಿ ಮೂರು ಕಿ.ಮೀ ದೂರ ನಡೆಸಿ ಅಮಾನವೀಯ ಕೃತ್ಯ ನಡೆಸಿದ್ದಾರೆ.

ಮಯೂರ್ಭಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪತಿ ಬಿಕ್ರಮ್ ಜೊತೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಬೈಕ್ ನ ಹಿಂಬದಿ ಕುಳಿತಿದ್ದ 27 ವರ್ಷದ ಗರ್ಭಿಣಿ ಗುರುಬಿರಿ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ದಂಡ ಪಾವತಿಸಲು ಬಿಕ್ರಮ್ ನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು.

700

ಬಿಕ್ರಮ್ ಹೆಲ್ಮೆಟ್ ಧರಿಸಿದ್ದರೆ, ಗುರುಬರಿ ದರಿಸಿಲಿಲ್ಲ. ಗುರುಬರಿಯನ್ನು ಸ್ಥಳದಲ್ಲೇ ಬಿಟ್ಟು ದಂಡವನ್ನು ಪಾವತಿಸಲು ಬಿಕ್ರಮ್ ಅವರನ್ನು ಪೊಲೀಸ್ ಠಾಣೆಗೆ ಹೋಗುವಂತೆ ಶರತ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ರೀನಾ ಬಕ್ಸಲ್ ಒತ್ತಾಯಿಸಿದರು.

ಈ ವೇಳೆ ಅಸಹಯಕಳಾಗಿ ನಿಂತಿದ್ದ ಒಂಬತ್ತು ತಿಂಗಳ ಗರ್ಭಿಣಿ ಬಿರು ಬಿಸಿಲಿನಲ್ಲಿ ಪೊಲೀಸ್ ಠಾಣೆಗೆ ಮೂರು ಕಿಲೋಮೀಟರ್ ನಡೆದುಕೊಂಡು ಹೋಗಿದ್ದರು.

ಈ ಘಟನೆ ವರದಿಯಾಗುತ್ತಿದ್ದಂತೆ ಮಯೂರ್ಭಂಜ್ ಎಸ್ಪಿ ಪರ್ಮಾರ್ ಸ್ಮಿಟ್ ಪರಶೋತ್ತಮ್ ದಾಸ್ ಸೋಮವಾರ ಮಹಿಳಾ ಪೊಲೀಸ್ ಅಧಿಕಾರಿ ರೀನಾ ಬಕ್ಸಲ್ ರನ್ನು ಅಮಾನತುಗೊಳಿಸಿದ್ದಾರೆ.

No Comments

Leave A Comment