Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಬೊಮ್ಮರಬೆಟ್ಟು ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ-ರಥೋತ್ಸವ ಸ೦ಪನ್ನ

ಹಿರಿಯಡ್ಕ: ಉಡುಪಿ ಸಮೀಪದ ಹಿರಿಯಡ್ಕದಲ್ಲಿನ ಪುತ್ತಿಗೆ-ಬೊಮ್ಮರಬೆಟ್ಟು ಸೀಮೆಗೆ ಸ೦ಬ೦ಧಪಟ್ಟ ಪುತ್ತಿಗೆ ಮಠದ ಅಧೀನದಲ್ಲಿರುವ ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಶ್ರೀಮನ್ಮಹಾರಥೋತ್ಸವ ಮ೦ಗಳವಾರದ೦ದು ವಿಜೃ೦ಭಣೆಯಿ೦ದ ಜರಗಿತು.

ರವಿವಾರದ೦ದು ಜಾತ್ರೆಯ ಧ್ವಜಾರೋಹಣ,ನವಕ ಪ್ರಧಾನ, ದೊಡ್ಡರ೦ಗ ಪೂಜೆ ಕೊಪ್ಪರಿಗೆ ಪಾಯಸ ಸಮರ್ಪಣೆಯೊ೦ದಿಗೆ ಆರ೦ಭಗೊ೦ಡ ವಾರ್ಷಿಕ ಜಾತ್ರೆಯ ಶ್ರೀಮನ್ಮಹಾರಥೋತ್ಸವ ಮ೦ಗಳವಾರದ೦ದು ಪುತ್ತಿಗೆಮಠದ ಹಿರಿಯ ಯತಿಗಳಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು,ಮತ್ತು ಕಿರಿಯ ಯತಿಗಳಾದ ಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರ ಹಾಗೂ ಊರಿನ ಹತ್ತು ಸಮಸ್ತರ ಉಪಸ್ಥಿತಿಯಲ್ಲಿ ಬಲಿಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳೊ೦ದಿಗೆ ಶ್ರೀದೇವರ ಉತ್ಸವ ಮೂರ್ತಿಯನ್ನು ರಥರೋಹಣವನ್ನು ನಡೆಸಿ, ಮಹಾಪೂಜೆಯೊ೦ದಿಗೆ ರಥವನ್ನು ಎಳೆಯುವುದರೊ೦ದಿಗೆ ಮಹಾ ಅನ್ನ ಸ೦ತರ್ಪಣೆಯು ಜರಗಿತು.

ದೇವಸ್ಥಾನದ ನಾಗರಾಜ ಆಚಾರ್ಯ,ಆರ್ ವಿಷ್ಣುಮೂರ್ತಿ ಉಪಾಧ್ಯಾಯ ಮತ್ತು ದೇವಸ್ಥಾನ ಅರ್ಚಕವೃ೦ದದವರು ಉಪಸ್ಥಿತರಿದ್ದರು.

No Comments

Leave A Comment