ಮಹಾರಾಷ್ಟ್ರ: ಗಡ್ ಚಿರೋಲಿ ಎನ್ ಕೌಂಟರ್ ನಲ್ಲಿ ಐವರು ನಕ್ಸಲೀಯರ ಹತ್ಯೆ
ಗಡ್ ಚಿರೋಲಿ: ಮಹಾರಾಷ್ಟ್ರದ ಗಡ್ ಚಿರೋಲಿಯ ಖೋಬ್ರಮೇಂಧ ಅರಣ್ಯ ಪ್ರದೇಶದಲ್ಲಿ ಸೋಮವಾರ ನಡೆದ ಎನ್ ಕೌಂಟರ್ ನಲ್ಲಿ ಐವರು ನಕ್ಸಲೀಯರನ್ನು ಪೊಲೀಸರು ಹತ್ಯೆ ಗೈದಿದ್ದಾರೆ.
ಖುರ್ಖೇಡಾ ಪ್ರದೇಶದ ಖೋಬ್ರಮೇಧ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರು ಹಾಗೂ ಪೊಲೀಸರ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಐವರು ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ ಎಂದು ನಕ್ಸಲ್ ಶ್ರೇಣಿಯ ಡಿಐಜಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಪೊಲೀಸರು ನೋಡಿದ ಕೂಡಲೇ ನಕ್ಸಲೀಯರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದಾಗ ಅಲ್ಲಿಂದ ಅವರು ಕಾಲ್ಕಿತ್ತಿದ್ದಾರೆ. ಒಂದು ಗಂಟೆಯ ಕಾಲ ನಡೆದ ಎನ್ ಕೌಂಟರ್ ನಲ್ಲಿ ಐವರು ನಕ್ಸಲೀಯರನ್ನು ಹತ್ಯೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎನ್ ಕೌಂಟರ್ ಮುಗಿದ ನಂತರ ಮದ್ದು ಗುಂಡುಗಳೊಂದಿಗೆ ಐವರು ನಕ್ಸಲೀಯರ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಅವರ ಗುರುತು ಪತ್ತೆಯಾಗಿಲ್ಲ ಎಂದು ಪಾಟೀಲ್ ತಿಳಿಸಿದ್ದಾರೆ.