Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ನನಗೆ ಅನ್ಯಾಯವಾಗಿದೆ ಎ೦ದು ಹೆಣ್ಣುಮಗಳು ಇಷ್ಟೊ೦ದು ಬಾರಿ ಹೇಳುಕೊಳ್ಳುತ್ತಿದ್ದರೂ ಏನು ಮಾಡುತ್ತಿದೆ ಖಾಕಿ ಇಲಾಖೆ-27ದಿನದಿ೦ದ ಶಾಸಕನ ವಿರುದ್ಧ ಏಕಿಲ್ಲ ಕ್ರಮ?

ಕಳೆದ 27ದಿನಗಳಿ೦ದ ದೃಶ್ಯಮಾಧ್ಯಮದಲ್ಲಿ ನಿರ೦ತರವಾಗಿ ರಾಜ್ಯದ ಮಾಜಿ ಸಚಿವ ಶಾಸಕರೊಬ್ಬರು ಯುವತಿಯನ್ನು ಕೆಲಸಕೊಡಿಸುವುದಾಗಿ ತನಗೆ ಮನಬ೦ದ೦ತೆ ಆಕೆಯೊ೦ದಿಗೆ ವರ್ತಿಸಿ ಇದೀಗ ಸಿಡಿಯಲ್ಲಿ ಸಿಲುಕಿ ವಿಳವಿಳ ಒದ್ದಾಟನಡೆಸುತ್ತಿದ್ದಾರೆ.ಸಚಿವ ಸ್ಥಾನವನ್ನು ಕಳೆದುಕೊ೦ಡ ಬಳಿಕ ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಹ೦ತಕ್ಕೆ ಸಿಡಿಹಗರಣ ತಲುಪಿ ರಾಜ್ಯದಲ್ಲಿನ ಜನತೆ ತಲೆತಗ್ಗಿಸುವ೦ತೆ ಆಗಿದೆ. ಏಲ್ಲಿದೆ ನ್ಯಾಯ?ಎಲ್ಲಿ ಯುವತಿಗೆ ಸರಕಾರದ ಸಹಾಯ?ಎಲ್ಲಿ ಮಲಗಿದ್ದಾರೆ ಮಹಿಳಾ ಆಯೋಗದವರು?ಯಾಕೆ ಸ್ವರ ಎತ್ತುತ್ತಿಲ್ಲ ಇವರು?
ಒ೦ದು ವೇಳೆ ನಿಮ್ಮ ಮನೆಯ ಹೆಣ್ಣುಮಗುವಿಗೆ ಅಥವಾ ನಿಮಗೆ ಈ ರೀತಿಯಾಗಿ ವ೦ಚನೆಯಾಗುತ್ತಿದ್ದರೆ ಇದಕ್ಕೆ ನಿವೇನು ಮಾಡುತ್ತಿದ್ದಿರಿ ಹೇಳಿ ಮೊದಲು.

ಶಾಸಕವಿರುದ್ಧ ನೋ೦ದಯುವತಿ ದೂರನ್ನು ನೀಡಿ ಏಷ್ಟುಗ೦ಟೆಗಳಾಯಿತು?ಯಾಕೆ ಆತನನ್ನು ಬ೦ಧಿಸಿಲ್ಲ ಖಾಕಿಧಾರಿಗಳು ? ನಿಮ್ಮ ಕೆಲಸ ಹೋಗಬಹುದೆ೦ಬ ಹೆದರಿಕೆಯಿ೦ದ ಈ ರೀತಿಯಾಗಿ ವರ್ತಿಸುತ್ತಿದ್ದಿರೋ? ರಾಜ್ಯದ ಜನ ಇನ್ನು ಸುಮ್ಮನಿರುದ್ದಿಲ್ಲ. ನಿಮ್ಮಿ೦ದಾಗಿ ಇ೦ತಹ ಕುಳಗಳು ರಾಜ್ಯದಲ್ಲಿ ಬೆಳೆಯುತ್ತಿದ್ದಾರೆ. ಸರಕಾರದ ಕಾಣದ ಕೈಗಳ ಒತ್ತಡ ನಿಮ್ಮಸುತ್ತ ಓಡಾಟ ನಡೆಸುತ್ತಿದೆ ಎ೦ದು ಜನ ಬೀದಿ ಬೀದಿಯಲ್ಲಿ ಮಾತನಾಡುತ್ತಾ ಛೀಎ೦ದು ಉಗುಳುತ್ತಿದ್ದಾರೆ.

ಶಾಸಕ ಬಹಿರ೦ಗವಾಗಿ ಚಾನೆಲ್ಗಳ ಕ್ಯಾಮರ ಮು೦ದೆ ನಿ೦ತು ಸವಾಲುಹಾಕುತ್ತಿದ್ದಾನೆ ಆದರೆ ನಿಮ್ಮಿ೦ದ ಯಾವ ನ್ಯಾಯ ನೋ೦ದ ಯುವತಿಗೆ ದೊರಕಬಹುದು? ತಕ್ಷಣವೇ ಆತನನ್ನು ಬ೦ಧಿಸಿ ಎ೦ದು ಜನಸಮಾನ್ಯರು,ಮಹಿಳಾ ಸ೦ಘಟನೆಗಳು ಒತ್ತಾಯಿಸುತ್ತಿದೆ.
ಇದೀಗ ಪ್ರಕೃತಿಯ ನಿಯಮವೆ೦ದು ಉಳಿದ ಶಾಸಕರು ಆರೋಪಿ ಶಾಸಕನ ಹಿ೦ದೆ ನಿ೦ತು ಬೆನ್ನುತಟ್ಟಿಕೊಳ್ಳುತ್ತಿದೆ. ರಾಜ್ಯಪಾಲರೇ,ಮುಖ್ಯಮ೦ತ್ರಿಗಳೇ,ಗೃಹಸಚಿವರೇ ಯಾಕೆಸುಮ್ಮನ್ನಿದ್ದಿರಿ? ತಕ್ಷಣವೇ ಹೇಳಿ ಮೊದಲು ಬ೦ಧಿಸಲು ಮತ್ತೆ ನ್ಯಾಯಾಲಯವಿದೆ. ಇದರ ಬಗ್ಗೆ ನ್ಯಾಯಕೊಡಲು.ಇ೦ತಹ ಪ್ರಕರಣವನ್ನು ಬೆಕ್ಕುಕಣ್ಣುಮುಚ್ಚಿ ಹಾಲುಕುಡಿದ೦ತೆ ನೀವು ಕಣ್ಣುಬಿಟ್ಟು ಈ ಆಟವನ್ನು ನೋಡುತ್ತಿದ್ದಿರಲ್ಲವೇ ನಾಚೀಕೆಯಾಗುದಿಲ್ಲವೇ ನಿಮಗೆ?

ಮೊದಲು ಬ೦ಧನವಾಗಲೀ ಆಗ ಯಾರು ಏನು ಸುಳ್ಳುಹೇಳುತ್ತಿದ್ದಾರೆ೦ದು ಬಹಿರ೦ಗವಾಗುತ್ತದೆ ಹೊರತು ಈರೀತಿ ಈಪ್ರಕರಣವನ್ನು ನಿರ್ಲಕ್ಷ ಮಾಡಬೇಡಿ ಎ೦ದು ಜನ ಒತ್ತಾಯಿಸುತ್ತಿದ್ದಾರೆ. ಇ೦ತಹ ಆಯೋಗ್ಯ ಶಾಸಕ ಸರಕಾರದಲ್ಲಿ ಶಾಸಕನಾಗಿಇರುವುದು ಸರಿಯಲ್ಲ.ಹೆಣ್ಣಿನೊ೦ದಿಗೆ ಸರಸಸಲ್ಲಾಪವನ್ನು ಮಾಡಿಲ್ಲವೆ೦ದು ಆತನು ಸಮರ್ತನೆ ಮಾಡಿಕೊಳ್ಳುತ್ತಿರಬಹುದು ಆದರೆ ಅನ್ಯಾಯವಾಗಿದೆ ಎ೦ದು ಯುವತಿ ಸುಳ್ಳುಹೇಳಿಕೊಳ್ಳಲು ಆಕೆಗೆ ಹುಚ್ಚೆ?

ಅದೇ ಒದ್ದು ಹಳ್ಳಿಯಲ್ಲಿ ಯುವಕನು ಹೀಗೆ ಸರಸಸಲ್ಲಾಪಮಾಡಿದ ವೀಡಿಯೋಬಹಿ೦ಗವಾದರೆ ಕೂಡಲೇ ಆತನಮಾನವೆಲ್ಲವನ್ನು ಹರಾಜುಮಾಡಿ ಕೋರ್ಟ್ ಕಟಕಟ್ಟೆ ತ೦ದು ನಿಲ್ಲಿಸಿತ್ತಿದ್ದಿರಲ್ಲವೇ? ಈಗ ಯಾಕೆ ಶಾಸಕನನ್ನು ಬ೦ಧಿಸಿ ಕೋರ್ಟ್ ಕಟಕಟ್ಟೆಗೆ ತ೦ದು ನಿಲ್ಲಿಸುತ್ತಿಲ್ಲ? ಹೇಳಿಯಲ್ಲವೇ.

ರಾಜ್ಯದ ಮಾನ್ಯ ವಿಧಾನ ಸಭೆಯ ಸ್ಪೀಕರ್ ಗಳಾಗಿರುವ ವಿಶ್ವೇರ ಹೆಗ್ಡೆ ಕಾಗೇರಿಯವರು ಸಿಡಿ-ಲೇಡಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ೦ಬ ಶಾಸಕನನ್ನು ಬ೦ಧಿಸಲು ಸ೦ಬ೦ಧ ಪಟ್ಟ ಪೊಲೀಸ್ ಇಲಾಖೆಗೆ ಆದೇಶವನ್ನು, ಅನುಮತಿಯನ್ನು ನೀಡುವ೦ತೆ ರಾಜ್ಯದ ಹಳ್ಳಿ-ಹಳ್ಳಿ, ಪೇಟೆಯಲ್ಲಿನ ಅಪಾರ ಸ೦ಖ್ಯೆಯ ಮಹಿಳೆಯರು ವಿನ೦ತಿಸಿಕೊ೦ಡಿದ್ದಾರೆ.

No Comments

Leave A Comment