Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಮಂಗಳೂರು: ಮದ್ಯಪಾನ ಮಾಡಿ ಕಾರು ಚಲಾಯಿಸಿದ ಪಿಡಬ್ಲ್ಯುಡಿ ಎಂಜಿನಿಯರ್ ಆಟಾಟೋಪಕ್ಕೆ ಪಾದಚಾರಿ ಬಲಿ!

ಮಂಗಳುರು: ಲೋಕೋಪಯೋಗಿ ವಿಭಾಗದ (ಪಿಡಬ್ಲ್ಯುಡಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ)ಭಾನುವಾರ ರಾತ್ರಿ ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯ ಬಳಿ ಪಾದಚಾರಿಯೊಬ್ಬನಿಗೆ ಕಾರ್ ಡಿಕ್ಕಿ ಹೊಡೆಸಿದ್ದು  ಪಾದಚಾರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಮೃತನನ್ನು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ ನಿವೃತ್ತ ಉದ್ಯೋಗಿ ಎ ಆನಂದ ಎಂದು ಗುರುಸಲಾಗಿದೆ. ಘಟನೆ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆಯ ಅಂತರ್ಜಲ ವಿಭಾಗದ ಎಇಇ ಆಗಿರುವ ಆರೋಪಿ ಷಣ್ಮುಗಮ್ ಅವರನ್ನು ಬಂಧಿಸಲಾಗಿದೆ.

ಭಾನುವಾರ ರಾತ್ರಿ 9.53 ಕ್ಕೆ ಅಪಘಾತ ಸಂಭವಿಸಿದೆ. ಸಿಸಿಟಿವಿ ಕ್ಯಾಮೆರಾದಾದಲ್ಲಿ ದೃಶ್ಯ ಸೆರೆಯಾಗಿದ್ದು ಷಣ್ಮುಗಂ ಓಡಿಸಿದ ಕಾರು ಆನಂದ್ ಅವರಿಗೆ ಸಾಕಷ್ಟು ವೇಗದಲ್ಲಿ ಡಿಕ್ಕಿ ಹೊಡೆಯುವುದನ್ನು ಕಾಣಬಹುದು. ಅಪಘಾತದ ಕಾರಣದಿಂದ ಆನಂದ್ ಸ್ವಲ್ಪ ದೂಅಕ್ಕೆ ಎಗರಿ ಬಿದ್ದಿದ್ದಾರೆ. ಮತ್ತು ಅಲ್ಲೇ ಸಾವನ್ನಪ್ಪಿದ್ದಾರೆ.ಘಟನಾ ಸ್ಥಳಕ್ಕೆ ಮಂಗಳೂರು ಪೋಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಆರೋಪಿ ಷಣ್ಮುಗಮ್ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ, ಮೃತರ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.

No Comments

Leave A Comment