Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಮಂಗಳೂರು: ಒಳ ಉಡುಪಿನಲ್ಲಿ 57 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ -ಓರ್ವ ಸೆರೆ

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಅಕ್ರಮ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕರೊಬ್ಬರ ವಿರುದ್ಧ ಕೇಸು ದಾಖಲಿಸಿದ್ದಾರೆ.

ಕಾಸರಗೋಡು ಮೂಲದ ಇಸ್ಮಾಯಿಲ್ ಅಹಮದ್ ಕಲ್ಲಾರ್ ಎಂಬವರು ದುಬೈನಿಂದ ಆಗಮಿಸಿದ್ದು, ಒಳ ಉಡುಪುಗಳಲ್ಲಿ ಸರಪಳಿಯ ರೀತಿಯಲ್ಲಿ 1.23 ಕೆ.ಜಿ ತೂಕದ 57,14,940 ರೂ. ಮೌಲ್ಯದ ಚಿನ್ನವನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ.

ಕಾರ್ಯಾಚರಣೆಯ ನೇತೃತ್ವವನ್ನು ಜಿಲ್ಲಾಧಿಕಾರಿ ಡಾ. ಕಪಿಲ್ ಗಡೆ ಐಆರ್‌ಎಸ್ ವಹಿಸಿದ್ದು, ಅವರೊಂದಿಗೆ ಶ್ರೀಕಾಂತ್ ಕೆ, ನಾಗೇಶ್ ಕುಮಾರ್, ನವೀನ್ ಅಧೀಕ್ಷಕ ಶ್ರೇಣಿಯ ಅಧಿಕಾರಿಗಳಾಗಿ ನಿರ್ವಹಿಸಿದ್ದಾರೆ.

No Comments

Leave A Comment