Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ತಲೆ ಕೆಳಗಾದ ರಾಜಕೀಯ ಸಮೀಕರಣ: ಬಿಜೆಪಿ ಸೋಲಿಸಲು ಬೆಳಗಾವಿ ಕ್ಷೇತ್ರಕ್ಕೆ ಎಂಇಎಸ್-ಶಿವಸೇನಾ ಮೈತ್ರಿ ಅಭ್ಯರ್ಥಿ ಕಣಕ್ಕೆ!

ಬೆಳಗಾವಿ: ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರ ಸಾಂಪ್ರಾದಾಯಿಕ ಎದುರಾಳಿಗಳಾಗಿದ್ದವು, ಅತಿ ದೊಡ್ಡ ಸಂಖ್ಯೆಯ ಮರಾಠಿಗರ ಮತಗಳು ಬಿಜೆಪಿ ಪರವಾಗಿ ಚಲಾವಣೆಯಾಗುತ್ತಿದ್ದವು.

ಆದರೆ ಈ ಬಾರಿ ಮರಾಠ ಮತಗಳು ಹರಿದು ಹಂಚಿಕೆಯಾಗುವ ಸಾಧ್ಯತೆಗಳಿವೆ, ಏಕೆಂದರೇ ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸಲಿದ್ದಾರೆ.

ಕಳೆದ ಹಲವು ಚುನಾವಣೆಗಳಲ್ಲಿ ಸತತ ಗೆಲುವು ಕಂಡು ಬೀಗುತ್ತಿರುವ ಬಿಜೆಪಿಗೆ ಇದು ಸವಾಲಿನ ವಿಷಯವಾಗಿದೆ.ಬದಲಾದ ರಾಜಕೀಯ ಸಮೀಕರಣದಿಂದ ಅಂದರೆ ಶಿವಸೇನಾ- ಎಂಇಎಸ್ ಮೈತ್ರಿ ಅಭ್ಯರ್ಥಿ ಎಂಟ್ರಿಯಿಂದ  ಬಾರಿ ಬಿಜೆಪಿಗೆ ಕಬ್ಬಿಣದ ಕಡಲೆಯಾಗಿದೆ.

ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಈ ಬಾರಿ ಶಿವಸೇನಾ ಅಥವಾ ಎಂಇಎಸ್ ನ  ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು  ಮಾಜಿ ಶಾಸಕ ಮನೋಹರ್ ಕಿಣೇಕರ್ ಹೇಳಿದ್ದಾರೆ. ಶಿವಸೇನಾ ಜೊತೆ ಮಾತುಕತೆ ನಡೆಸಲಾಗಿದ್ದು, ಎಂಇಎಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ  ಕರ್ನಾಕದ ಬಿಜೆಪಿ ಸರ್ಕಾರ ಮತ್ತು ಮಹಾರಾಷ್ಟ್ರದ  ಶಿವಸೇನಾ ಸರ್ಕಾರ ಗಡಿ ವಿಷಯವಾಗಿ ವಾಕ್ಸಮರ ನಡೆದಿತ್ತು,  ಈ ಸಂಬಂಧ ಗಡಿಯಲ್ಲಿ ಹಿಂಸಾಚಾರ ಕೂಡ ನಡೆದಿತ್ತು.  ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ ಇದೇ ಮೊದಲ ಬಾರಿಗೆ ಬೆಳಗಾವಿ ಚುನಾವಣೆಗೆ ಎಂಇಎಸ್ ಮತ್ತು ಶಿವಸೇನೆ ಚುನಾವಣೆ ಎದುರಿಸುತ್ತಿವೆ.

ಈ ಬಾಗದಲ್ಲಿ ಅತಿ ಹೆಚ್ಚಿ ಸಂಖ್ಯೆಯ ಮರಾಠಿ ಮತದಾರರಿದ್ದಾರೆ,  ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಹಾಗೂ ಬೆಳಗಾವಿ ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿ ಪ್ರಾಬಲ್ಯವಿದೆ.  ಆದರ ಈ ಬಾರಿ ಎಂಇಎಸ್-ಸೇನೆ, ಹಾಗೂ ಬಿಜೆಪಿ ನಡುವೆ ಮತಗಳ ಹಂಚಿಕೆಯಾಗಲಿದೆ. ಕಾಂಗ್ರೆಸ್ ಕೂಡ ಕೆಲ ಭಾಗಗಳಲ್ಲಿ ಪ್ರಾಬಲ್ಯವಿದೆ.  ಆದರೆ ಈ ಎಲ್ಲಾ ಅಡೆತಡೆಗಳನ್ನು ನಿರ್ಲಕ್ಷ್ಯಿಸುತ್ತಿರುವ ಬಿಜೆಪಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ.

No Comments

Leave A Comment