Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಹೋಳಿ ಹಬ್ಬದ ಮೇಲೆ ಕೊರೋನಾ ಕರಿನೆರಳು: ಸಂಭ್ರಮದಿಂದ ದೂರ ಉಳಿಯುವಂತೆ ಜನತೆಗೆ ವೈದ್ಯರ ಸಲಹೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ದೈನಂದಿನ ಸಂಖ್ಯೆ 2,000 ಗಡಿಯತ್ತ ಸಾಗಿದ್ದು, ಕೊರೋನಾ 2ನೇ ಅಲೆ ಆತಂಕ ಶುರುವಾಗಿದೆ. ಇದರ ನಡುವಲ್ಲೇ ಹೋಳಿ ಹಬ್ಬ ಹತ್ತಿರ ಬಂದಿದ್ದು, ಹಬ್ಬದ ಮೇಲೂ ಕೊರೋನಾ ಕರಿನೆರಳು ಬಿದ್ದಿದೆ.

ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಜನರು ಸೇರಿದ್ದೇ ಆದರೆ, ಸೋಂಕು ಸಮುದಾಯ ಹಂತ ತಲುಪುವ ಸಾಧ್ಯತೆಗಳಿದ್ದು, ಸಂಭ್ರಮಾಚರಣೆಗಳಿಂದ ದೂರ ಉಳಿಯುವಂತೆ ಜನತೆಗೆ ವೈದ್ಯರು ಸಲಹೆ ನೀಡಿದ್ದಾರೆ.

ಆರೋಗ್ಯ ಸಚಿವ ಸುಧಾಕರ್ ಅವರೂ ಕೂಡ ರಾಜ್ಯದಲ್ಲಿ ಎರಡನೇ ಅಲೆ ಆತಂಕ ಶುರುವಗಿದ್ದು, ಜನರು ಹೆಚ್ಚೆಚ್ಚು ಜನರಿರುವ ಪ್ರದೇಶಗಳಿಗೆ ತೆರಳುವುದನ್ನು ನಿಯಂತ್ರಿಸಬೇಕು ಎಂದು ಹೇಳಿದ್ದಾರೆ.

ಈ ನಡುವೆ ಹರಿಯಾಣ ಹಾಗೂ ದೆಹಲಿಯಲ್ಲಿ ಹೋಳಿ ಹಬ್ಬದ ಸಂಭ್ರಮಕ್ಕೆ ನಿಷೇಧ ಹೇರಿದ್ದು, ರಾಜ್ಯದಲ್ಲಿ ಈ ಬಗ್ಗೆ ಮಾರ್ಗಸೂಚಿ ಹೊರಡಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿದುಬದಿದೆ.

ಹೋಳಿ ಹಬ್ಬದ ಸಂಭ್ರಮಾಚರಣೆಗಳು ನಡೆಯದೇ ಇರುವುದೇ ಉತ್ತಮ. ಹೆಚ್ಚೆಚ್ಚು ಜನರು ಸೇರುವುದನ್ನು ನಿಯಂತ್ರಿಸಬೇಕಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಆಸ್ಟರ್ ಸಿಎಮ್ಐ ಆಸ್ಪತ್ರೆಯ ವೈದ್ಯ ಡಾ. ಬ್ರೂಂಡಾ ಎಂ ಎಸ್, ಮಾತನಾಡಿ, ರಾಜ್ಯದಲ್ಲಿ ಈಗಾಗಲೇ 2ನೇ ಅಲೆ ಶುರುವಾಗಿದೆ. ಈ ವರ್ಷ ಹೋಳಿ ಹಬ್ಬ ಆಚರಣೆ ಮಾಡದಂತೆ ನಾವು ಬಲವಾಗಿ ಸಲಹೆಯನ್ನು ನೀಡುತ್ತಿದ್ದೇವೆ. ಸಂಭ್ರಮಾಚರಣೆ ವೇಳೆ ಹೆಚ್ಚೆಚ್ಚು ಜನರು ಸೇರುವುದರಿಂದ ಆರೋಗ್ಯವಾಗಿರುವ ವ್ಯಕ್ತಿಗೂ ಸೋಂಕು ತಗುಲು ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇಂತಹ ಬೆಳವಣಿಗೆ ಸೋಂಕು ಸಮುದಾಯ ಹಂತ ತಲುಪುವಂತೆ ಮಾಡಲಿದೆ. ಇದರಿಂದ ರಾಜ್ಯದಲ್ಲಿ ಸೋಂಕಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಹೇಳಿದ್ದಾರೆ.

ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ.ರವೀಂದ್ರ ಮೆಹ್ತಾ ಅವರು ಮಾತನಾಡಿ, ಹಬ್ಬಗಳಿಗಾಗಿ ಮಾರ್ಗಸೂಚಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ. ಹೋಳಿ ಹಬ್ಬದ ಸಂಭ್ರಮದ ವೇಳೆ ಕೊರೋನಾ ನಿಯಮಗಳು ಉಲ್ಲಂಘನೆಯಾಗುವುದು ಹೆಚ್ಚಾಗಲಿದೆ. ಹೋಳಿ ಆಡುವಾಗ ಮಾಸ್ಕ್ ಗಳು ನೀರಿನಲ್ಲಿ ನೆನೆಯುತ್ತವೆ. ಇದರಿಂದ ಸೋಂಕು ಹೆಚ್ಚಾಗಿ ಹರಡುವ ಸಾಧ್ಯತೆಗಳಿರುತ್ತವೆ. ಹೋಳಿ ಆಡುವಾಗ ಬಣ್ಣಗಳನ್ನು ಕೈಗಳಿಂದ ಒಬ್ಬರ ಮೇಲೆ ಒಬ್ಬರಿಗೆ ಹಾಕಲಾಗುತ್ತದೆ. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಕುಟುಂಬ ಸದಸ್ಯರು ಮಾತ್ರ ಹಬ್ಬವನ್ನು ಆಚರಣೆ ಮಾಡುವಂತೆ ಮಾಡಬಹುದು ಎಂದು ತಿಳಿಸಿದ್ದಾರೆ.

No Comments

Leave A Comment