Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಪಣಿಯಾಡಿಯಲ್ಲೊಂದು ಅನಂತ ವಿಸ್ಮಯ- ಗೋಳಾಕಾರದ ಗುಹೆಪತ್ತೆ

ಉಡುಪಿಯಿಂದ 3 ಕಿಲೋ ಮೀಟರ್ ದೂರದಲ್ಲಿರುವ ಪಣಿಯಾಡಿಯಲ್ಲಿ 1000 ವರುಷಗಳ ಹಿಂದಿನ ಇತಿಹಾಸ ಉಳ್ಳ ಒಂದು ಪುರಾತನ ದೇವಸ್ಥಾನ – ಪಣಿಯಾಡಿ ಅನಂತ ಪದ್ಮನಾಭ ದೇವಸ್ಥಾನ. ಪುತ್ತಿಗೆ ಮಠ ಹಾಗೂ ಪಣಿಯಾಡಿಯ ಅನಂತ ಭಕ್ತವೃಂದದ ಉಸ್ತುವಾರಿಯಲ್ಲಿ ದೇವಳದ ಜೀರ್ಣೋದ್ಧಾರ ಕೆಲಸ ಪ್ರಗತಿಯಲ್ಲಿ ಸಾಗುತ್ತಿದ್ದು ಮೇ ತಿಂಗಳಲ್ಲಿ ಬೃಹ್ಮಕಲಶದ ಆಶಯವಿಟ್ಟು ಜೀರ್ಣೋದ್ದಾರದ ಕೈಂಕರ್ಯ ಶೀಘ್ರ ತೆಯನ್ನು ಕಾಣುತ್ತಿದೆ.

ಈ ಸಂದರ್ಭದಲ್ಲೊಂದು ಅಂದರೆ ದಿನಾಂಕ ಮಾರ್ಚ್ 23 ರಂದು ಒಂದು ಕೌತುಕ ಹಾಗೂ ವಿಸ್ಮಯಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ದೇವಳದ ಪೌಳಿ ನಿರ್ಮಾಣಕ್ಕಾಗಿ ಮಣ್ಣು ಅಗೆಯುತ್ತಿರುವಾಗ ದೇವಳದ ಉತ್ತರ ಭಾಗದಲ್ಲಿ ಸುಮಾರು ನೆಲ ಮಟ್ಟದಿಂದ 8 ಅಡಿ ಕೆಳಗೆ ಒಂದು ಅರ್ಧ ಗೋಳಾಕಾರದ ಗುಹೆಯೊಂದು ಕಂಡು ಬಂದಿದೆ. ಆ ಗುಹೆಯ ಮೇಲ್ಮೈ ಯಲ್ಲಿ ಕಲ್ಲಿನ ಮುಚ್ಚಳವಿದ್ದಂತಿತ್ತು. ಮಿಕ್ಸಿ ಜಾರ್ ನ ಮುಚ್ಚಳದಂತೆ ಇದ್ದ ಈ ಗುಹೆಯ ಒಳಮ್ಮೆ ನುಣುಪಾಗಿದ್ದು ಅದರಲ್ಲಿ 2-3 ಕಿಂಡಿಗಳಂತಿದ್ದು ಬಹಳ ಸುಂದರವಾಗಿ ನಿರ್ಮಿತ ವಾಗಿದೆ. ಆದರೆ ನೆಲ ಅಗೆಯುವ ಸಂದಭ೯ದಲ್ಲಿ ಅದರ ಅರಿವಿಲ್ಲದೆ ಒಂದು ಭಾಗ ಬಿನ್ನಗೊಂಡಿದೆ. ಆದರೆ ಇದರ ವಿಶೇಷತೆ ಯ ಬಗ್ಗೆ ಇನ್ನೂ ಏನೂ ವಿಷಯಗಳು ತಿಳಿದಿಲ್ಲ. ಹಿಂದೆ ಋಷಿ ಮುನಿಗಳು ತಪಸ್ಸು ಗೈಯುವ ಸ್ಥಳವಿದಾಗಿರಬಹುದು ಎನ್ನುವುದು ಕೆಲವರ ಊಹೆ. ಪ್ರಕೃತಿ ನಿರ್ಮಿತ ಈ ಗುಹೆ ನೋಡಲು ಆಕರ್ಷಕವಾಗಿದೆ.

ದೇವಳಕ್ಕೂ ಈ ಗುಹೆಗೂ ಏನಾದರೂ ವಿಶೇಷವಾದ ಅವಿನಾಭಾವ ಸಂಬಂಧವಿರುವುದಂತೂ ಬಹು ಸತ್ಯ. ಇದಕ್ಕೆ ಸಂಬಂಧಪಟ್ಟಂತೆ ಈ ಗುಹೆಯ ಸ್ಥಳ ಮಹಿಮೆ ಇನ್ನು ಬೆಳಕಿಗೆ ಬರಬೇಕಾಗಿದೆ. ಏನೇ ಇರಲಿ. ಈ ಸ್ಥಳದೊಡೆಯ ಪದುಮನಾಭ ವಿವಾಹ ಮತ್ತುವಿದ್ಯೆಗೆ ಅಧಿದೇವತೆಯಾಗಿದ್ದು ಶೀಘ್ರ ಫಲದಾಯಕ ಮತ್ತು ಈ ಸನ್ನಿಧಿ ಬಹಳ ಕಾರಣಿಕ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ. ಇನ್ನೊಂದು ವಿಶೇಷತೆ ಏನೆಂದರೆ ಹೀಗೆ ಆದಿಶೇಷನ ಮೇಲೆ ಕುಳಿತಿರುವ ಭಂಗಿಯಲ್ಲಿರುವ ಈ ಅನಂತ ಪದ್ಮನಾಭನ ಮೂರ್ತಿ ಬಹಳ ವಿರಳ ಅಥವಾ ಬೇರೆ ಎಲ್ಲೂ ಗೋಚರಕ್ಕೆ ಬಂದಿಲ್ಲ.

No Comments

Leave A Comment