Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಚಿಕ್ಕಮಗಳೂರು: ಹೆದ್ದಾರಿ ಅಗಲೀಕರಣಕ್ಕಾಗಿ 3,455 ಮರಗಳಿಗೆ ಕೊಡಲಿ!

ಚಿಕ್ಕಮಗಳೂರು: ಕಡೂರು-ಚಿಕ್ಕಮಗಳೂರು-ಮೂಡಿಗೆರೆಯಾದ್ಯಂತ ರಾಷ್ಟ್ರೀಯ ಹೆದ್ದಾರಿ-173 ಅಗಲೀಕರಣ ಕಾಮಗಾರಿ ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ಬರೊಬ್ಬರಿ 3,455 ಮರಗಳನ್ನು ನೆಲಕ್ಕೆ ಉರುಳಿಸಲಾಗಿದೆ. ಈ ಪೈಕಿ ಹಲವು ಪಾರಂಪರಿಕ ಸಾಲಿನ ಮರಗಳನ್ನೂ ನೆಲಸಮಗೊಳಿಸಲಾಗಿದೆ.

ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 2,318 ಮರಗಳನ್ನು ಕಡಿಯಲಾಗಿದ್ದು, ಕಡೂರು ವ್ಯಾಪ್ತಿಯಲ್ಲಿ 1,137 ಮರಗಳು ಕೊಡಲಿಗೆ ಬಲಿಯಾಗಿವೆ. ಮರಗಳ ಮಾರಣಹೋಮಕ್ಕೆ ಬದಲಾಗಿ ಹೊಸ ಸಸಿಗಳನ್ನು ನೆಡುವುದಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು, ಕಾಮಗಾರಿ ಪೂರ್ಣಗೊಂಡ ನಂತರ  ಜೂನ್ ನಂತರ ಬೃಹತ್ ಪ್ರಮಾಣದಲ್ಲಿ ಹಸಿರು ಯೋಜನೆ ಜಾರಿಗೆ ಬರಲಿದೆ.

ಆದರೆ ಪರಿಸರವಾದಿಗಳ ಪ್ರಕಾರ, ಸ್ಥಳೀಯ ಶಾಸಕರು, ಸಂಸದರು, ಎನ್ ಹೆಚ್ಎಐ ಅಧಿಕಾರಿಗಳು ಆಸಕ್ತಿ ವಹಿಸಿದ್ದರೆ ಪಾರಂಪರಿಕ ಮರಗಳನ್ನು ಉಳಿಸಬಹುದಿತ್ತು.

ಕಾಮಗಾರಿ ಪೂರ್ಣಗೊಂಡ ಬಳಿಕ ಎರಡೂ ಬದಿಗಳಲ್ಲಿ ಜಾಗ ಇರುವುದಿಲ್ಲ. ಗಿಡಗಳನ್ನು ನೆಡುವುದಕ್ಕೆ ಸೂಕ್ತವಾದ ಯೋಜನೆಯೂ ಇಲ್ಲ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಚಿಕ್ಕಮಗಳೂರು ಪ್ರಾದೇಶಿಕ ವಿಭಾಗ ಅರಣ್ಯ ಉಪ ಸಂರಕ್ಷಣಾಧಿಕಾರಿ ಎನ್ ಹೆಚ್ ಜಗನ್ನಾಥ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಮರಗಳನ್ನು ಕತ್ತರಿಸುವುದಕ್ಕೆ ಪರ್ಯಾಯವಾಗಿ 144 ಹೆಕ್ಟೇರ್ ಪ್ರದೇಶದಲ್ಲಿ ಗಿಡಗಳನ್ನು ಬೆಳೆಸುವ ಯೋಜನೆ ಸಿದ್ಧಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

No Comments

Leave A Comment