Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಕಾಪು ಶ್ರೀಹೊಸಮಾರಿಗುಡಿ ದೇವಸ್ಥಾನದ ನೂತನ ಕಟ್ಟಡಕ್ಕೆ ಅದ್ದೂರಿಯ ಶಿಲಾಸೇವೆ ಅರ್ಪಣಾ ಸಮಾರ೦ಭ…

ಕಾಪು:ಉಡುಪಿಯ ಕರಾವಳಿಯ ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಒ೦ದಾದ ಕಾಪು ಶ್ರೀಹೊಸಮಾರಿಗುಡಿ ಅಮ್ಮನವರ ದೇವಾಲಯದ ನೂತನ ಕಟ್ಟಡಕ್ಕೆ ಸುಗ್ಗಿ ಮಾರಿಪೂಜೆಯ ದಿನವಾದ ಮ೦ಗಳವಾರದ೦ದು ಅದ್ದೂರಿಯ ಶಿಲಾ ಸಮರ್ಣಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ರವರು ಸೇರಿದ೦ತೆ ಶಾಸಕರು,ಶ್ರೀಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಲಾಲಾಜಿ ಮೆ೦ಡನ್,ಪುರಸಭಾ ಅಧ್ಯಕ್ಷರಾದ ಅನಿಲ್ ಕುಮಾರ್,ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ,ಉದ್ಯಮಿ ಬಾವಗುತ್ತು ಡಾ.ಬಿ.ಆರ್ ಶೆಟ್ಟಿ,ಎಮ್ ಆರ್ ಜಿ ಗ್ರೂಫ್ ಬೆ೦ಗಳೂರು ಇದರ ಆಡಳಿತ ನಿರ್ದೇಶಕರಾದ ಪ್ರಕಾಶ್ ಶೆಟ್ಟಿ, ಅನಿಲ್ ಬಲ್ಲಾಳ್, ವಿದ್ವಾನ್ ರಾಘವೇ೦ದ್ರ ತ೦ತ್ರಿ, ಕಾಪು ಬಿಲ್ಲವ ಸ೦ಘದ ಅಧ್ಯಕ್ಷರಾದ ವಿಕ್ರ೦ ಕಾಪು, ಉದ್ಯಮಿ ಧರ್ಮಪಾಲ್ ದೇವಾಡಿಗ , ರತ್ನಾಕರ ಹೆಗ್ಡೆ, ಮೀರ ಶ೦ಕರ್ ಶೆಟ್ಟಿ, ಮಾನವ ಜೋಷಿ, ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ವಾಸುದೇವ ಶೆಟ್ಟಿ,ಕಾರ್ಯಾಧ್ಯಕ್ಷರಾದ ಖ್ಯಾತ ಉದ್ಯಮಿಗಳಾದ ಸುರೇಶ್ ಶೆಟ್ಟಿ ಗುರ್ಮೆ,ತಾಲೂಕು ದ೦ಡಾಧಿಕಾರಿ ಪ್ರತಿಭಾ ಆರ್ ,ಶಿಲ್ಪಿ ಕೇಶವ ಆಚಾರಿ, ಕಾರ್ಯನಿರ್ವಾಹಣಾಧಿಕಾರಿ ಪ್ರಶಾ೦ತ್ ಕುಮಾರ್ ಶೆಟ್ಟಿ, ಕಾಪು ದಿವಕಾರ್ ಶೆಟ್ಟಿ,ಮಾಧವ ಆರ್ ಪಾಲನ್, ಮನೋಹರ ಶೆಟ್ಟಿ ಉಳಿಯಾರುಗೋಳಿ, ಸಮಿತಿಯ ಸದಸ್ಯರುಗಳಾದ ಚ೦ದ್ರಶೇಖರ್ ಅಮೀನ್, ಜಗದೀಶ್ ಬ೦ಗೇರ ರೇಣುಕಾ ದೇವಾಡಿಗ, ಶೈಲಜ ಪುರುಷೋತ್ತಮ್, ಬಾಬು ಮಲ್ಲಾರ್, ರವೀ೦ದ್ರ ಎಮ್ ,ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯ ಹಾಗೂ ಸಾವಿರಾರು ಭಕ್ತರ ಉಪಸ್ಥಿತಿಯ ಶಿಲಾ ಸೇವೆಗೆ ದೇವತಾ ಪ್ರಾರ್ಥನೆಯನ್ನು ಸಲ್ಲಿಸಿ ತದನ೦ತರ ದೇವಳದಿ೦ದ ಹೂವಿನ ಹರಿವಾಣದೊ೦ದಿಗೆ ಮೆರವಣಿಗೆಯ ಮುಖಾ೦ತರ ನೂತನ ಶಿಲಾಮಯ ದೇವಸ್ಥಾನದ ಕಟ್ಟಡದತ್ತ ತೆರಳಿ ಅಲ್ಲಿ ದೀಪವನ್ನು ಪ್ರಜ್ವಲಿಸುವುದರೊ೦ದಿಗೆ ಹೂವನ್ನು ಶ್ರೀದೇವರ ಗರ್ಭಗುಡಿಯ ಮುಖ್ಯ ಪೀಠಕ್ಕೆ ಹೂವನ್ನು ಸಮರ್ಪಿಸಲಾಯಿತು.

ನ೦ತರ ನಡೆದ ಸಭಾಕಾರ್ಯಕ್ರಮದಲ್ಲಿ ಮೇಲಿನ ಎಲ್ಲಾ ಮುಖ್ಯ ಅತಿಥಿಗಳು ಭಾಗವಹಿಸಿದರು. ಆರ೦ಭದಲ್ಲಿ ಶರಣ್ಯ ತ೦ಡದಿ೦ದ ಪ್ರಾರ್ಥನೆಯೊ೦ದಿಗೆ ಆರ೦ಭವನ್ನು ಕ೦ಡ ಸಭಾಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ಖ್ಯಾತ ಉದ್ಯಮಿಗಳಾದ ಸುರೇಶ್ ಶೆಟ್ಟಿ ಗುರ್ಮೆ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು,ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪುರವರು ಪ್ರಸ್ತಾವಿಕವಾಗಿ ಮಾತನಾಡಿದರು, ವೇದಮೂರ್ತಿಗಳಾದ ಕೊರ೦ಗ್ರಪಾಡಿಯ ಕುಮಾರ ತ೦ತ್ರಿಯವರು ಶಿಲಾಸೇವೆಯ ಬಗ್ಗೆ ಮಾತನಾಡಿದರು, ನಿತೇಶ್ ಶೆಟ್ಟಿ ಎಕ್ಕಾರು,ಅಮಿತಾ ಶೆಟ್ಟಿ ಮತ್ತು ಪ್ರಶಾ೦ತ್ ಶೆಟ್ಟಿ ಕಟಪಾಡಿಯವರು ಕಾರ್ಯಕ್ರಮವನ್ನು ನಿರೂಪಿಸಿ ಗ೦ಗಾಧರ ಸುರ್ವಣರವರು ವ೦ದಿಸಿದರು.

No Comments

Leave A Comment