Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಶೂಟಿಂಗ್ ವಿಶ್ವಕಪ್: ಭಾರತದ ಎಲವೆನಿಲ್, ದಿವ್ಯಾಂಶ್ ಗೆ ಚಿನ್ನ

ನವದೆಹಲಿ: ದೆಹಲಿಯ ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ನಲ್ಲಿ ನಡೆದ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ನ 10 ಮೀಟರ್ ಏರ್ ರೈಫಲ್ ಮಿಕ್ಸೆಡ್ ಟೀಂ ಸ್ಪರ್ಧೆಯಲ್ಲಿ ಭಾರತದ ಎಲವೆನಿಲ್ ವಲರಿವನ್ ಮತ್ತು ದಿವ್ಯಾಂಶ್ ಸಿಂಗ್ ಪನ್ವಾರ್ ಚಿನ್ನದ ಪದಕ ಜಯಿಸಿದ್ದಾರೆ.

ಅಂತಿಮ ಸುತ್ತಿನಲ್ಲಿ ಅವರು ಒಟ್ತಾಗಿ 16 ಅಂಕ ಗಳಿಸಿದ್ದರು. ಈ ಮೂಲಕ ಹಂಗೇರಿಯ ಇಸ್ತವಾನ್‌ ಪೆನಿ  ಮತ್ತು ಎಸ್ಜ್ಟರ್ ಡೆನೆಸ್ ಅವರನ್ನು ಹಿಂದಿಕ್ಕಿದ್ದರು.

ಅಂತಿಮ ಹಂತದ ಶೂಟಿಂಗ್ ನಲ್ಲಿ ವಲರಿವನ್ ಮತ್ತು ಪನ್ವಾರ್ ತಲಾ 10.4 ರಲ್ಲಿ ಚಿನ್ನದ ಪದಕ ಖಚಿತ ಮಾಡಿಕೊಂಡಿದ್ದರು.ಹಂಗೇರಿಯನ್ ಜೋಡಿ 10.7 ಮತ್ತು 9.9 ಗಳಿಸಿತು.

ಅದಕ್ಕೂ ಮೊದಲು, ಭಾರತೀಯ ಶೂಟರ್ ಗಳು ತಲಾ ಮೂರು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.

No Comments

Leave A Comment