Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ದಂಗೆ–ಪ್ರತಿಭಟನೆ: ಮ್ಯಾನ್ಮಾರ್‌ನಲ್ಲಿ 230 ಕ್ಕೂ ಹೆಚ್ಚು ನಾಗರಿಕರ ಸಾವು

ನಾಯ್ಪಿಡಾವ್: ಮ್ಯಾನ್ಮಾರ್ ನಲ್ಲಿ 44 ದಿನಗಳ ದಂಗೆ ಮತ್ತು ವಿರೋಧಿ ಪ್ರತಿಭಟನೆ ವೇಳೆ ಜರುಗಿದ ಹಿಂಸಾತ್ಮಕ ದಾಳಿಯಲ್ಲಿ ಮ್ಯಾನ್ಮಾರ್ ನಲ್ಲಿ ಒಟ್ಟು 235 ಜನರು ಸಾವನ್ನಪ್ಪಿದ್ದಾರೆ ಎಂದು ಮ್ಯಾನ್ಮಾರ್ ನ ನಾಗರಿಕ ಹಕ್ಕುಗಳ ಸಮೂಹದ ರಾಜಕೀಯ ಕೈದಿಗಳ ಸಹಾಯ ಸಂಘ ತಿಳಿಸಿದೆ.

ಗುರುವಾರದ ವೇಳೆಗೆ, ಸಾವಿನ ಸಂಖ್ಯೆ 224 ಕ್ಕೆ ಏರಿಕೆಯಾಗಿಯಾಗಿದ್ದರೂ ನಿಜವಾದ ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಫೆಬ್ರವರಿ 1ರಿಂದ ಇಲ್ಲಿಯವರೆಗೆ, ರಾಜಕೀಯ ಕೈದಿಗಳ ಸಹಾಯ ಸಂಘ(ಎಎಪಿಪಿ) ವಸಂತ ಕ್ರಾಂತಿಯ ಸಮಯದಲ್ಲಿ 235 ಜನರು ಮೃತಪಟ್ಟಿದ್ದಾರೆ ಎಂದು ಎಎಪಿಪಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದೆ.

ಮಿಲಿಟರಿ ದಂಗೆ ಯತ್ನಕ್ಕೆ ಸಂಬಂಧಿಸಿದಂತೆ 2,330 ಜನರನ್ನು ಬಂಧಿಸಲಾಗಿದ್ದು ಶಿಕ್ಷೆ ವಿಧಿಸಲಾಗಿದೆ ಎಂದು ಹಕ್ಕುಗಳ ಗುಂಪು ಸೇರಿಸಲಾಗಿದೆ.

No Comments

Leave A Comment