Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಅಯೋಧ್ಯೆಯ ರಾಮ ಲಲ್ಲಾ ದೇಗುಲದಲ್ಲಿ “ರಾಮ್ ಸೇತು” ಚಿತ್ರಕ್ಕೆ ಮುಹೂರ್ತ

ಅಯೋಧ್ಯಾ/ಲಖನೌ: ಬಾಲಿವುಡ್ ನಟ ಅಕ್ಷಯ್ ಕುಮಾರ್, ನಟಿಯರಾದ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನುಶ್ರತ್ ಭರೂಚಾ ಅವರು ತಮ್ಮ ಮುಂಬರುವ ಚಿತ್ರ ‘ರಾಮ್ ಸೇತು’ ಮುಹೂರ್ತದಂದು ಗುರುವಾರ ರಾಮಜನ್ಮಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಬಾಲಿವುಡ್ ನಟರನ್ನು ರಾಜ ಅಯೋಧ್ಯ ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಮತ್ತು ಅವರ ಪುತ್ರ ಯತೀಂದ್ರ ಮಿಶ್ರಾ ಅವರು ಸ್ಮರಣಿಕೆ ಮತ್ತು ಶಾಲು ನೀಡುವ ಮೂಲಕ ಸ್ವಾಗತಿಸಿದರು.

ನಂತರ ರಾಮ್ ಸೇತು ತಂಡವು ಲಖನೌ ತಲುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ನೋಯ್ಡಾದಲ್ಲಿ ನಿರ್ಮಾಣವಾಗಲಿರುವ ಚಲನಚಿತ್ರ ಸಂಸ್ಥೆ ಮತ್ತು ಚಲನಚಿತ್ರಗಳಿಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಚರ್ಚಿಸಿದರು. ಅಯೋಧ್ಯೆಯ ರಾಮ್ ಲಲ್ಲಾ ದೇವಾಲಯದ ಆವರಣದಲ್ಲಿ, ರಾಮ್ ಸೇತು ಚಿತ್ರದ ಮುಹೂರ್ತ ನೆರವೇರಿಸಲಾಯಿತು.

ಅಯೋಧ್ಯೆಯಲ್ಲಿ ನೆರವೇರಿಸಲಾದ ಪೂಜೆಯ ಫೋಟೋವನ್ನು ನಟ ಅಕ್ಷಯ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಷೇಕ್ ಶರ್ಮಾ ನಿರ್ದೇಶನದ ‘ರಾಮ್ ಸೇತು’ ಚಿತ್ರವನ್ನು ಅಕ್ಷಯ್ ಅವರ ಕೇಪ್ ಆಫ್ ಗುಡ್ ಫಿಲ್ಮ್ಸ್, ಅಬುಂಡಾಂಟಿಯಾ ಎಂಟರ್ಟೈನ್ಮೆಂಟ್, ಲೈಕಾ ಪ್ರೊಡಕ್ಷನ್ಸ್ ಮತ್ತು ಪ್ರೈಮ್ ವಿಡಿಯೋ ನಿರ್ಮಿಸಲಿದೆ.

No Comments

Leave A Comment