Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿ ಶ್ರೀಕೃಷ್ಣಮಠಕ್ಕೆ 60ಲಕ್ಷ ರೂಪಾಯಿ ವೆಚ್ಚದಲ್ಲಿ ಸೌರ ವಿದ್ಯುತ್ ಘಟಕ

ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪರಿಸರಸ್ನೇಹಿ ವಿಶಿಷ್ಟ ಯೋಜನೆಯೊಂದನ್ನು ಅನುಷ್ಠಾನಗೊಳಿಸಲು ಸಂಕಲ್ಪಿಸಿದ್ದು, ಭಕ್ತರು ಈ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಶ್ರೀಕೃಷ್ಣಾನುಗ್ರಹಕ್ಕೆ ಪಾತ್ರರಾಗುವ ಅಪೂರ್ವ ಸದಾವಕಾಶವು ತಮ್ಮದಾಗಿದೆಯೆಂದು ತಿಳಿಸಲು ಸಂತೋಷಪಡುತ್ತೇವೆ.

ಶ್ರೀಕೃಷ್ಣ ಮಠದಲ್ಲಿ ಎಲ್ಲಾ ವಿಭಾಗಗಳಲ್ಲಿ ಅಪಾರ ಪ್ರಮಾಣದಲ್ಲಿ ವಿದ್ಯುತ್ ಶಕ್ತಿಯ ಅವಶ್ಯಕತೆಯಿದೆ. ಇದನ್ನು ಒದಗಿಸಲು ಸ್ವಂತ ವಿದ್ಯುತ್ ಉತ್ಪಾದನಾ ಘಟಕವನ್ನು ಹೊಂದುವುದು ಈಗಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ. ಅದಕ್ಕಾಗಿ ಶ್ರೀಕೃಷ್ಣ ಮಠದ ಆವರಣದಲ್ಲಿ 135 ಕಿ. ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್ ಘಟಕ (Solar Unit)ವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರ ಅಂದಾಜು ವೆಚ್ಚ ಸುಮಾರು ರೂ. 60.00 ಲಕ್ಷ.

ಈ ಪರಿಸರಸ್ನೇಹಿ ಸೋಲಾರ್ ವಿದ್ಯುತ್ ಅಳವಡಿಸಿರುವುದರಿಂದ ಶ್ರೀಕೃಷ್ಣ ಮಠದಲ್ಲಿ ಉಪಯೋಗಿಸುವ ಒಟ್ಟು ವಿದ್ಯುಚ್ಛಕ್ತಿ ಮೊತ್ತದಲ್ಲಿ ಅರ್ಧದಷ್ಟು ಹೊರೆ ಕಡಿಮೆಯಾಗಲಿದೆ. ಈ ಯೋಜನೆಯನ್ನು ಶ್ರೀಕೃಷ್ಣ ಮಠದಲ್ಲಿ ಅಳವಡಿಸುವುದರ ಮೂಲಕ ಭಾರತದ ಮಾನ್ಯ ಪ್ರಧಾನಮಂತ್ರಿಯವರ ಆತ್ಮನಿರ್ಭರ ಯೋಜನೆಗೆ ಶಕ್ತಿ ತುಂಬಿದಂತಾಗುತ್ತದೆ ಎಂಬುದು ಶ್ರೀಗಳವರ ಆಶಯ. ಕರ್ನಾಟಕ ಬ್ಯಾಂಕ್ ಈಗಾಗಲೇ ಈ ಯೋಜನಾ ವೆಚ್ಚದ 1/3 ಅಂಶ ಸಹಕಾರವನ್ನು ನೀಡಿದೆ. ಈ ಯೋಜನೆಯನ್ನು ಪೂರ್ಣಗೊಳಿಸುವ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಲು ಭಕ್ತರಿಗೆ ಸದವಕಾಶ ನೀಡಲಾಗಿದೆ.ಎ೦ದು ಮಠದ ವ್ಯವಸ್ಥಾಪಕರಾದ ಗೋವಿ೦ದ ರಾಜ್ ರವರು ಪತ್ರಿಕಾಗೋಷ್ಥಿಯಲ್ಲಿ ವಿವರಿಸಿದ್ದಾರೆ.

ಈ ಪತ್ರಿಕಾಗೋಷ್ಠಿಯಲ್ಲಿ ಹಿರಿಯರಾದ ಯು. ಕೆ. ರಾಘವೇಂದ್ರ ರಾವ್ ಇಂಜಿನಿಯರ್ ಉಡುಪಿ, ವೈ. ಎನ್. ರಾಮಚಂದ್ರ ರಾವ್, ಶ್ರೀನಿವಾಸ ಪೆಜತ್ತಾಯ , ಗಣೇಶ ಹೆಬ್ಬಾರ್ ಸಿಎ ಉಡುಪಿ, ಪ್ರದೀಪ್ ರಾವ್ ಹೈಟೆಕ್ , ಪುರುಷೋತ್ತಮ ಅಡ್ವೆ, ಮಾಧವ ಉಪಾಧ್ಯಾಯ , ರೋಹಿತ ತಂತ್ರಿ, ಶ್ರೀಶ ಭಟ್ ಕಡೆಕಾರ್, ಬಾಲಕೃಷ್ಣ ಆಚಾರ್ಯ ಉಪಸ್ಥಿತರಿರುವರು.

 

Monthly Electricity Bill – Rs. 2.00 lac
Yearly Electricity Bill – Rs. 24.00 lac
Solar Project 135kwp
Daily Energy Generation – 540 units/average
Monthly Energy Generation – 16,200 units/Months
Electricity Rate Mescom 6.75/unit + 9% Tax = 7.35/unit
Monthly Savings – Rs. 1,50,000
Yearly Savings – Rs. 18.00 lac
Payback Period – 4 Years
Total Project Cost – Rs. 60.00 lacs

No Comments

Leave A Comment