Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಕೋವಿಡ್-19: ಲಸಿಕೆ ಪಡೆದ 9 ಗಂಟೆಯಲ್ಲಿ ವ್ಯಕ್ತಿ ಸಾವು, ಬೆಳಗಾವಿಯಲ್ಲಿ ಹೆಚ್ಚಿದ ಆತಂಕ

ಬೆಳಗಾವಿ: ಕೊರೋನಾ ಲಸಿಕೆ ಪಡೆದ 9 ಗಂಟೆಗಳಲ್ಲಿ 69 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು ಬೆಳಗಾವಿ ಜಿಲ್ಲೆಯಲ್ಲಿ ಜನರು ಆತಂಕಕ್ಕೊಳಗಾಗುವಂತೆ ಮಾಡಿದೆ. ಜಿಲ್ಲೆಯಲ್ಲಿ ಲಸಿಕೆ ಪಡೆದ ಬಳಿಕ ಸಾವು ಸಂಭವಿಸಿದ 7ನೇ ಪ್ರಕರಣ ಇದಾಗಿದೆ.

ಕಾಕತಿ ಗ್ರಾಮ ಪಂಚಾಯತ್ ಸದಸ್ಯರಾಗಿರುವ 69 ವರ್ಷದ ವ್ಯಕ್ತಿ ಕಾಕತಿಯಲ್ಲಿ ಮಾರ್ಚ್ 15 ರಂದು ಕೊರೋನಾ ಲಸಿಕೆ ಪಡೆದುಕೊಂಡಿದ್ದರು. ರಾತ್ರಿ 11.30ರ ಸುಮಾರಿಗೆ ವ್ಯಕ್ತಿಯಲ್ಲಿ ಕಿಬ್ಬೊಟ್ಟೆಯಲ್ಲಿ ನೋವು, ಸುಡುತ್ತಿರುವ ಸಂವೇದನೆ, ಎದೆಯಲ್ಲಿ ನೋವು ಹಾಗೂ ಬೆವರುತ್ತಿರುವ ಸಮಸ್ಯೆಗಳು ಕಂಡು ಬಂದಿದೆ. ಮಾರ್ಚ್ 16ರ ಬೆಳಿಗ್ಗೆ ವ್ಯಕ್ತಿ ವಾಂತಿ ಮಾಡಿಕೊಂಡಿದ್ದು, ನಂತರ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.

ಮೃತಪಟ್ಟ ವ್ಯಕ್ತಿ ಮದ್ಯವ್ಯಸನಿಯಾಗಿದ್ದರೆಂದು ಹೇಳಲಾಗುತ್ತಿದೆ. ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಕುಟುಂಬಸ್ಥರು ನಿರಾಕರಿಸಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಇಎಫ್ಐ ಸಮಿತಿಯ ಅಧಿಕಾರಿಗಳು, ವ್ಯಕ್ತಿಯದ್ದು ಸಾಮಾನ್ಯ ಸಾವಾಗಿದ್ದು, ಲಸಿಕೆಗೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದ್ದಾರೆ.

No Comments

Leave A Comment