Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಯುವತಿ ನೇರ ಆರೋಪ, ರಮೇಶ್ ಜಾರಕಿಹೊಳಿ ಬಂಧಿಸಿ ತನಿಖೆ ನಡೆಸಬೇಕು- ಕಾಂಗ್ರೆಸ್ ಒತ್ತಾಯ

ಬೆಂಗಳೂರು: ಉದ್ಯೋಗ ಕೇಳಿ ಬಂದ ಯುವತಿಯನ್ನು ದುರ್ಬಳಕೆ ಮಾಡಿಕೊಂಡಿರುವುದು ಆಕೆಯ ಹೇಳಿಕೆಯಿಂದ ಸ್ಪಷ್ಟವಾಗಿರುವುದರಿಂದ ರಮೇಶ್ ಜಾರಕಿಹೊಳಿ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ, ಬಂಧಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ವಿಡಿಯೋ ಬಿಡುಗಡೆ ಮಾಡಿದ್ದು ರಮೇಶ್ ಜಾರಕಿಹೊಳಿಯವರೇ ಎಂದು ಯುವತಿ ನೇರವಾಗಿ ಆರೋಪಿಸಿದ್ದರೂ
ಗೃಹ ಇಲಾಖೆ ಮಾಜಿ ಸಚಿವರನ್ನ ವಿಚಾರಣೆ ನಡೆಸದೆ ಇನ್ನೂ ಮೀನಾಮೇಷ ಎಣಿಸುತ್ತಿರುವುದೇಕೆ? ಎಂದು ಪ್ರಶ್ನಿಸಿರುವ ಕಾಂಗ್ರೆಸ್,  ಈ ಸರ್ಕಾರ ತಮ್ಮವರ ರಕ್ಷಣೆಗೆ ನಿಂತಿದಿಯೇ ಹೊರತು ರಾಜ್ಯದ ಜನತೆಯ ರಕ್ಷಣೆಗಲ್ಲ ಎನ್ನುವುದು  ಬಿಜೆಪಿ ನಡವಳಿಕೆಗಳಿಂದ ತಿಳಿಯುತ್ತದೆ ಎಂದು ಆರೋಪಿಸಿದೆ.

ಯುವತಿ ಹಾಗೂ ಕುಟುಂಬಸ್ಥರಿಗೆ ಜೀವ ಬೆದರಿಕೆ ಇರುವುದು ಆಕೆಯ ಹೇಳಿಕೆಯಲ್ಲಿ ತಿಳಿಯುತ್ತದೆ. ರಕ್ಷಣೆ ನೀಡಬೇಕೆಂದು ಕೇಳಿಕೊಂಡಿದ್ದಾಳೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡಲೇ ಆಕೆ ಹಾಗೂ ಕುಟುಂಬಕ್ಕೆ ಸೂಕ್ತ ರಕ್ಷಣೆ ಮಾಡಬೇಕು, ನೊಂದವರ ರಕ್ಷಣೆ ನಿಮ್ಮ ಜವಾಬ್ದಾರಿಯಾಗಿದೆ ಎಂದು ಕೆಪಿಸಿಸಿ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

ವಿಡಿಯೋ ಬಿಡುಗಡೆ ಮಾಡಿದ್ದೇ ಮಹಾ ಅಪರಾಧ ಎನ್ನುವುದನ್ನ ಬಿಟ್ಟು  ಸರ್ಕಾರಕ್ಕೆ ಮಹಿಳೆಯರ ಪರ ಗೌರವ ಇದಿದ್ದೇ ಆದರೆ ಯುವತಿಯ ಶೋಷಣೆ ಮಾಡಿದ ರಮೇಶ್ ಜಾರಕಿಹೊಳಿಯವರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ ಬಂಧಿಸಿ ತನಿಖೆ ನಡೆಸಬೇಕು ಎಂದು  ಕಾಂಗ್ರೆಸ್ ಒತ್ತಾಯಿಸಿದೆ.

No Comments

Leave A Comment