Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಮಹಿಳಾ ಕ್ರಿಕೆಟ್: ಏಕದಿನ ಪಂದ್ಯದಲ್ಲಿ 7 ಸಾವಿರ ರನ್ ಪೂರೈಸಿದ ಪ್ರಥಮ ಆಟಗಾರ್ತಿ ಮಿಥಾಲಿ!

ನವದೆಹಲಿ: ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಭಾನುವಾರ ಮತ್ತೊಂದು ಸಾಧನೆ ಮಾಡಿದ್ದಾರೆ. ಮಹಿಳೆಯರ ಏಕದಿನ ಕ್ರಿಕೆಟ್ ನಲ್ಲಿ ಏಳು ಸಾವಿರ ರನ್  ಪೂರೈಸಿದ ಪ್ರಥಮ ಆಟಗಾರ್ತಿಯಾಗಿ ಅವರು ಹೊರಹೊಮ್ಮಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ನಾಲ್ಕನೇ ಏಕದಿನ ಪಂದ್ಯದಲ್ಲಿ ತನ್ನ 213ನೇ ಪಂದ್ಯದಲ್ಲಿ  ಭಾರತೀಯ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್, 7 ಸಾವಿರ ರನ್ ಗಳ ಮೈಲುಗಲ್ಲು ಧಾವಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ,  ಟೀಂ ಇಂಡಿಯಾ ಏಕದಿನದ ನಾಯಕಿ ಮಿಥಾಲಿ, 7 ಸಾವಿರ ರನ್ ಪೂರೈಸಿದ ಪ್ರಥಮ ಮಹಿಳೆಯಾಗಿದ್ದಾರೆ. ಆಕೆಯದ್ದು  ಎಂತಹ ಅದ್ಬುತ ಪ್ರದರ್ಶನ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

1999ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪ್ರವೇಶಿಸಿದ್ದ 38 ವರ್ಷದ ಮಿಥಾಲಿ, ಮಹಿಳೆಯರ ಏಕದಿನ ಪಂದ್ಯದಲ್ಲಿ 6 ಸಾವಿರ ರನ್ ಪೂರೈಸಿದ ಮೊದಲ ಆಟಗಾರ್ತಿಯಾಗಿದ್ದಾರೆ.  2016ರಲ್ಲಿ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಇಂಗ್ಲೆಂಡ್ ನ ಚಾರ್ಲೆಟ್ ಎಡ್ವರ್ಡ್ಸ್ 5,992 ರನ್ ಕಲೆಹಾಕುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ 38ನೇ ಓವರ್ ನಲ್ಲಿ ಮಧ್ಯಮ ವೇಗಿ ತುಮಿ ಸೆಖುಖುನೆ ಅವರಿಂದ ಔಟಾಗುವ ಮುನ್ನ ಮಿಥಾಲಿ 45 ಎಸತೆಗಳಲ್ಲಿ 71 ರನ್ ಗಳಿಸಿದರು. ನಾಲ್ಕು ಬೌಂಡರಿಗಳನ್ನು ಹೊಡೆದರು.

ಶುಕ್ರವಾರ ನಡೆದ ಮೂರನೇ ಪಂದ್ಯದಲ್ಲಿ ಎಲ್ಲಾ ಮಾದರಿಗಳಲ್ಲಿ 10 ಸಾವಿರ ರನ್ ಪೂರೈಸಿದ ಭಾರತದ ಪ್ರಥಮ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಎರಡನೇ ಆಟಗಾರ್ತಿ ಎಂಬ ಖ್ಯಾತಿಗೆ ಮಿಥಾಲಿ ಪಾತ್ರರಾದರು.

No Comments

Leave A Comment