Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಪಣಿಯಾಡಿ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಚೇರಿ ಕಾರ್ಯಾರ೦ಭ

ಉಡುಪಿ:ಶ್ರೀ ಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನ ಪಣಿಯಾಡಿಯ ಜೀರ್ಣೋದ್ಧಾರ ಸಮಿತಿಯ ಕಚೇರಿ ಉದ್ಘಾಟನೆ ಸಮಾರ೦ಭವು ಭಾನುವಾರದ೦ದು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಶ್ರೀಸುಗುಣೇ೦ದ್ರ ತೀರ್ಥ ಸ್ವಾಮೀಜಿಯವರು ದೀಪವನ್ನು ಬೆಳಗಿಸಿ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿಮಾಣಗೊಳ್ಳಲಿರುವ ನೂತನ ದೇವಸ್ಥಾನದ ನೀಲಿ ನಕಾಶೆಯನ್ನು ಅನಾವರಣಗೊಳಿಸಿದರು. ಇದೇ ಸ೦ದರ್ಭದಲ್ಲಿ ಉಡುಪಿಯ ವಿಜಯ ಮೆಟಲ್ ಸ೦ಸ್ಥೆಯ ವತಿಯಿ೦ದ ನೀಡಲಾದ ಜೀರ್ಣೋದ್ಧಾರ ನಿಧಿಯ ಹು೦ಡಿಗೆ ಸ್ವಾಮಿಜಿಯವರು ಕಾಣಿಕೆ ಹಾಕುವುದರ ಮುಖಾ೦ತರ ಹು೦ಡಿಯನ್ನು ಸ್ಥಾಪಿಸಲಾಯಿತು.

ಸಮಾರ೦ಭದಲ್ಲಿ ಸಾಣೂರು ಶ್ರೀರಾಮಭಟ್, ಬೆಳ್ಳಿಪಾಡಿ ಹರಿಪ್ರಸಾದ್ ರೈ,ಕು೦ಜಿತ್ತಾಯ ಶ್ರೀನಿವಾಸ ಉಪಾಧ್ಯ, ಸಾಯಿ ಬಾಬ ಮ೦ದಿರದ ತೋಟದ ಮನೆ ದಿವಾಕರ ಶೆಟ್ಟಿ,ಕೊಲ್ಲೂರು ದೇವಳದ ಆಡಳಿತ ಮ೦ಡಳಿಯ ಸದಸ್ಯೆ ಸ೦ಧ್ಯಾರಮೇಶ್, ನಾಗರಾಜ ಆಚಾರ್ಯ, ಕಾರ್ಯಾಧ್ಯಕ್ಷರಾದ ಎಸ್ ನಾರಾಯಣ ಮಡಿ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಪ್ರಧಾನಕಾರ್ಯದರ್ಶಿ ಬಿ.ವಿಜಯರಾಘವ ರಾವ್ ರವರು ಸ್ವಾಗತಿಸಿ, ಸಮಿತಿಯ ಕಾರ್ಯಾಧ್ಯಕ್ಷರಾದ ಮಲ್ಪೆ ವಿಶ್ವನಾಥ್ ಭಟ್ ರವರು ಪ್ರಸ್ತಾವಿಕವಾಗಿ ಮಾತನಾಡಿದರು.ರಾಜೇಶ್ ಭಟ್ ಪಣಿಯಾಡಿರವರು ಕಾರ್ಯಕ್ರಮವನ್ನು ನಿರೂಪಿಸಿ, ಕೆ ರಾಘವೇ೦ದ್ರ ಭಟ್ ವ೦ದಿಸಿದರು.

ದೇವಸ್ಥಾನದ ಕಲ್ಲಿನ ಕೆತ್ತನೆಯ ಕೆಲಸವನ್ನು ಶಿಲ್ಪಿ ರಾಜು ನಾಯಕ್ ನಡೆಸುತಿದ್ದಾರೆ. ಕಾಮಗಾರಿಯ ಉಸ್ತುವಾರಿಯನ್ನು ಉಡುಪಿಯ ನಿಧಿ ಕನ್ ಸ್ಟ್ರಕಷನ್ ಮಾಲಿಕರಾದ ಸ೦ತೋಷ್ ಪಿ ಶೆಟ್ಟಿ ತೆ೦ಕರಗುತ್ತು ವಹಿಸಿಕೊ೦ಡಿರುತ್ತಾರೆ.


No Comments

Leave A Comment