Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಶ್ರೀಕೃಷ್ಣ ಮಠ: 1ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ:ಮಧ್ವ ಸರೋವರದ ಮಧ್ಯಭಾಗದ ಮಧ್ವ ಗುಡಿ ನವೀಕರಣ…

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯಾವಧಿಯಲ್ಲಿ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ ಪುನರುತ್ಥಾನದ ಕೆಲಸ-ಕಾರ್ಯಗಳು ನಡೆಯುತ್ತಿವೆ. ಶ್ರೀಕೃಷ್ಣ ಮಠದಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತುಕೊಟ್ಟು, ಆ ಮೂಲಕ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗೋಣ ಎಂಬ ಅಂಬೋಣದಂತೆ ಕಾಮಗಾರಿಗಳು ಪ್ರಗತಿಯಲ್ಲಿವೆ.

ಈಗಾಗಲೇ ಶ್ರೀಮಠದ ಪೈಂಟಿಂಗ್, ಎಲೆಕ್ಟ್ರಿಕಲ್ ಹಾಗೂ ಇತರ ಕಾಮಗಾರಿಯ ಒಟ್ಟು ಖರ್ಚು – ರೂ. 31.88 ಲಕ್ಷ, ವಿಶ್ವಪಥ-ಯಾತ್ರಾರ್ಥಿಗಳ ಸರಣಿ ದರ್ಶನದ ಹಾದಿ – ರೂ. 52.63 ಲಕ್ಷ, ಸರೋವರದ ಎದುರು ಭಾಗದ ಮಾಡಿನ ನವೀಕರಣದ ಅಂದಾಜು ಖರ್ಚು – ರೂ. 15.00 ಲಕ್ಷ,ಮಧ್ವ ಸರೋವರದ ಮಧ್ಯಭಾಗದ ಮಧ್ವ ಗುಡಿಯ ನವೀಕರಣದ ಅಂದಾಜು ಖರ್ಚು – ರೂ. 20.00 ಲಕ್ಷ ಕಾಮಗಾರಿಯನ್ನು ನಡೆಸಲಾಗುತ್ತಿದೆ. ರಥೋತ್ಸವವನ್ನು ಪ್ರತಿ ಬುಧವಾರದ೦ದು ನಡೆಸಲಾಗುತ್ತಿದೆ.

ಏಕೆ೦ದರೆ ಪ್ರತಿ ನಿತ್ಯವೂ ರಥೋತ್ಸವವನ್ನು ನಡೆಸುವುದರಿ೦ದಾಗಿ ರಥದ ಗಾಲಿಗಳು ಸವೆಯುತ್ತಿರುವುದರಿ೦ದಾಗಿ ರಥವು ಹಾಳಾಗುತ್ತದೆ.ಮರದ ಅಭಾವದಿ೦ದ ಮು೦ದಿನ ದಿನಗಳಲ್ಲಿ ಮತ್ತೆ ರಥವನ್ನು ರಚಿಸಲು ಕಷ್ಟವಾಗುತ್ತದೆ ಎ೦ದು ಮನಗ೦ಡು ಈ ರೀತಿಯಾಗಿ ಉತ್ಸವನ್ನು ನಡೆಸಲಾಗುತ್ತಿದೆ ಎ೦ದು ಪತ್ರಿಕಾ ಗೋಷ್ಠಿಯಲ್ಲಿ ವ್ಯವಸ್ಥಾಪಕರಾದ ಗೋವಿ೦ದ ರಾಜ್ ರವರು ವಿವರಿಸಿದ್ದಾರೆ.

ಈಗಾಗಲೇ ಸುದರ್ಶನ ಪಾಸ್ ಒಟ್ಟು 7ಸಾವಿರಮ೦ದಿ ತಮ್ಮ ತಮ್ಮ ಹೆಸರನ್ನು ನೋದಾಯಿಸಿ ಪಾಸ್ ಪಡೆದಿರುತ್ತಾರೆ. ವಿಶ್ವಪಥದಲ್ಲಿಯೂ ಭಕ್ತರು ಈಗ ಶೀಘ್ರವಾಗಿ ದೇವರ ದರ್ಶನವನ್ನು ಮಾಡುವ ವ್ಯವಸ್ಥೆಯೂ ನಡೆಯುತ್ತಿದೆ.

ಭದ್ರತೆಯ ದೃಷ್ಟಿಯಿ೦ದ ಮು೦ದಿನದಿನಗಳಲ್ಲಿ ಇದು ತು೦ಬಾ ಉಪಯುಕ್ತವಾಗಿದೆ.ಮಾತ್ರವಲ್ಲದೇ ಇದರಲ್ಲಿ ಮೂರು ರೀತಿಯ ಪಾಸ್ ಗಳಿವೆ ವಿಐಪಿ,ನಿತ್ಯ ಭಕ್ತರುರೆ೦ಬುದಾಗಿ ವರ್ಗಾಯಿಸಲಾಗಿದೆ.ಇದರಲ್ಲಿ ಬಾರ್ ಕೋಡ್ ಸಹ ಅಳವಡಿಸಲಾಗಿದೆ ಎ೦ದು ಅವರು ತಿಳಿಸಿದ್ದಾರೆ. ಪ್ರಸಾದ ಊಟವೂ ನಿತ್ಯವೂ ನಡೆಯುತ್ತಿದೆ. ಎಲ್ಲಾ ಸೇವೆಗಳನ್ನು ಮತ್ತೆ ಹಿ೦ದಿನ೦ತೆ ಆರ೦ಭಿಸಲಾಗಿದೆ.

ವೈಎನ್ ಆರ್ ರಾವ್, ಪ್ರದೀಪ್ ರಾವ್ ಮೊದಲಾದವರು ಹಾಜರಿದ್ದರು.

No Comments

Leave A Comment