ಸದ್ದಿಲ್ಲದೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಟಿಕ್ ಟಾಕ್ ಬೆಡಗಿ: ಬಿಗ್ ಬಾಸ್ ಸ್ಪರ್ಧಿ ಧನುಶ್ರೀ ಈಗ ಹೀರೋಯಿನ್!
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ‘ಟಿಕ್ ಟಾಕ್’ ಮೂಲಕ ಪರಿಚಯವಾಗಿದ್ದ ಧನುಶ್ರೀ ‘ಬಿಗ್ ಬಾಸ್’ಗೆ ತೆರಳಿ ಹೊರಬಂದಾಗಿದೆ. ಹಾಗಾದ್ರೆ ಆಕೆ ಈಗೇನ್ಮಾಡ್ತಿದ್ದಾರೆ ಗೊತ್ತಾ? ಆಕೆಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ.
ಬಿಗ್ ಬಾಸ್ 8 ನೇ ಸರಣಿಯ ಮೊಟ್ಟ ಮೊದಲ ಸ್ಪರ್ಧಿ ಹಾಗೂ ಅಲ್ಲಿಂದ ಹೊರಬಂದ ಮೊದಲ ಸ್ಪರ್ಧಿಯೂ ಇವರೇ ಆಗಿದ್ದಾರೆ. ಇಷ್ಟು ಬೇಗ ದೊಡ್ಮನೆಯಿಂದ ಆಚೆ ಬರ್ತೀನಿ ಅಂದುಕೊಂಡಿರಲಿಲ್ಲವೆಂದು ಬೇಸರ ವ್ಯಕ್ತ ಪಡಿಸುವ ಧನುಶ್ರೀ ಅದಾಗಲೇ ಸದ್ದೇ ಇಲ್ಲದಂತೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟುಬಿಟ್ಟಿದ್ದಾರೆ.
ಇನ್ನೂ ಹೆಸರಿಡದ ಕನ್ನಡ ಚಿತ್ರವೊಂದರಲ್ಲಿ ಧನುಶ್ರೀ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ತೆಲುಗು ನಟ ಅಶ್ವಿನ್ ಹೀರೋ ಆಗಿರುವ ಚಿತ್ರಕ್ಕೆ ಧನುಶ್ರೀ ನಾಯಕಿಯಾಗಿದ್ದಾರೆ. ರೋಮ್ಯಾಂಟಿಕ್ ಲವ್ ಸ್ಟೋರಿ ಹೊಂದಿರುವ ಚಿತ್ರದ ಕೆಲ ಭಾಗದ ಚಿತ್ರೀಕರಣ ಈಗಾಗಲೇ ನಡೆದಿದೆ. ಸದ್ಯದಲ್ಲೇ ಶೂಟಿಂಗ್ ಗೆ ಮತ್ತೆ ಚಾಲನೆ ಸಿಗಲಿದ್ದು, ಇತರೆ ಸನ್ನಿವೇಶಗಳ ಚಿತ್ರೀಕರಣ ಹಾಗೂ ಸಾಂಗ್ ಶೂಟಿಂಗ್ ನಲ್ಲಿ ಧನುಶ್ರೀ ಪಾಲ್ಗೊಳ್ಳುತ್ತಾರೆ.
ಚಿತ್ರದಲ್ಲಿರುವ ನಟಿ ಪಾತ್ರ ಧನುಶ್ರೀಗೆ ತುಂಬಾ ಹತ್ತಿರವಾಗಿರುವ ಕಾರಣ ಸಿನಿಮಾ ಒಪ್ಪಿಕೊಂಡಿದ್ದಾರಂತೆ. ‘Something new coming up’ಎಂದು ಧನುಶ್ರೀ ಇನ್ ಸ್ಟಾ ಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.