Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಇಂಡೋನೇಷ್ಯಾದಲ್ಲಿ ಕಂದಕಕ್ಕೆ ಉರುಳಿದ ಬಸ್ – 26 ಮಂದಿ ಮೃತ್ಯು 35 ಜನರಿಗೆ ಗಾಯ

ಇಂಡೋನೇಷ್ಯಾ: ಇಸ್ಲಾಮಿಕ್ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಯಾತ್ರಾ ಸ್ಥಳಕ್ಕೆ ತೆರಳುತ್ತಿದ್ದಾಗ ಬಸ್‌ ಕಂದಕಕ್ಕೆ ಉರುಳಿ 26 ಸಾವು, 35 ಮಂದಿಗೆ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಅಕೋ ಪ್ರಸೆಟಿಯೊ ರಾಬಿಟೊ ತಿಳಿಸಿದ್ದಾರೆ.

ಈ ಘಟನೆಯಲ್ಲಿ 26 ಮಂದಿ ಮೃತಪಟ್ಟಿದ್ದು, ಗಾಯಗೊಂಡಿರುವ 35 ಆಸ್ಪತ್ರೆ ಮತ್ತು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ ಎಂದು ಬಂದಂಗ್ ಸರ್ಚ್ ಅಂಡ್ ರೆಸ್ಕ್ಯೂ ಏಜೆನ್ಸಿ ಮುಖ್ಯಸ್ಥ ಡೆಡೆನ್ ರಿಡ್ವಾನ್ಸಾ ತಿಳಿಸಿದ್ದಾರೆ.

ಇನ್ನು ಅಪಘಾತಕ್ಕೀಡಾದ ಬಸ್ ನಲ್ಲಿ ಸಿಲುಕಿರುವ ಮತ್ತೊಬ್ಬ ವ್ಯಕ್ತಿಗಾಗಿ ರಕ್ಷಣಾ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

No Comments

Leave A Comment