ಒಳ ಉಡುಪಿನಲ್ಲಿ 1.10 ಕೋಟಿ ರೂ. ಮೌಲ್ಯದ ಚಿನ್ನ ಸಾಗಣೆ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಹಿಳೆ ಸೆರೆ
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಮಾರ್ಚ್ 11 ರ ಗುರುವಾರ ಮಹಿಳಾ ಪ್ರಯಾಣಿಕರಿಂದ ದೊಡ್ಡ ಪ್ರಮಾಣದ ಅಕ್ರಮ ಚಿನ್ನ ಹಾಗೂ ವಿದೇಶಿ ಸಿಗರೇಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾಸರಗೋಡಿನ ಮೊಹಮ್ಮದ್ ಅಲಿ ಸಮೀರಾ ಎಂಬಾಕೆ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದಿದ್ದರು. ಆಕೆ ಸ್ಯಾನಿಟರಿ ಪ್ಯಾಡ್ಗಳು ಮತ್ತು ಸಾಕ್ಸ್ಗಳನ್ನೂ ಒಳಗೊಂಡಂತೆ ತನ್ನ ಒಳ ಉಡುಪುಗಳಲ್ಲಿ ಚಿನ್ನವನ್ನು ಮುಚ್ಚಿಟ್ಟು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಳು.
1.10 ಕೋಟಿ ರೂ. ಮೌಲ್ಯದ 2.41 ಕೆಜಿ ಚಿನ್ನವನ್ನು ಆಕೆಯಿಂದ ವಶಪಡಿಸಿಕೊಳ್ಳಲಾಗಿದೆ. ಮಾತ್ರವಲ್ಲದೆ ವಿದೇಶಿ ಮೂಲದ ಸಿಗರೇಟ್ಗಳನ್ನು ಸಹ ಆಕೆಯ ಬಳಿ ಪತ್ತೆ ಮಾಡಲಾಗಿದೆ. ಆಕೆ ಕೋಪ್ಟಾ ನಿಯಮಗಳನ್ನು ಉಲ್ಲಂಘಿಸಿ ಈ ಸಿಗರೇಟ್ ಗಳನ್ನು ಸಾಗಿಸುತ್ತಿದ್ದಳು.