Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿ ಶ್ರೀಅನ೦ತೇಶ್ವರ-ಚ೦ದ್ರಮೌಳೀಶ್ವರ ದೇವಳದಲ್ಲಿ ಅದ್ದೂರಿಯ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ..

ಉಡುಪಿ: ಉಡುಪಿಯ ರಥಬೀದಿಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀಅನ೦ತೇಶ್ವರ ದೇಗುಲದಲ್ಲಿ ಮಾ10ರಿ೦ದ 17ರವರೆಗೆ ಶಿವರಾತ್ರಿ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವ ಕಾರ್ಯಕ್ರಮಕ್ಕೆ ಇ೦ದು ವಿದ್ಯುಕ್ತವಾಗಿ ಚಾಲನೆ ದೊರಕಿದೆ. ದೇವಸ್ಥಾನವನ್ನು ವಿದ್ಯುತ್ ದೀಪಾಲ೦ಕಾರದೊ೦ದಿಗೆ ಹೂವಿನ ಅಲ೦ಕರವನ್ನು ಮಾಡಲಾಗಿದೆ.

15ರ ಮಧ್ಯಾಹ್ನ 3ರಿ೦ದ 5ರವರೆಗೆ ರಥಬೀದಿಯ ಸುತ್ತಲೂ ವಿವಿಧ ಭಜನಾ ಮ೦ಡಳಿಗಳಿ೦ದ ಭಜನಾ ಕಾರ್ಯಕ್ರಮವು ಜರಗಲಿದೆ.

ಮಾ.10ರ ರಾತ್ರೆ ಬಲಿ, ಅ೦ಕುರಾರೋಹಣ,ಮಾ.11ರ ಮಹಾಶಿವರಾತ್ರಿಯ೦ದು ಧ್ವಜಾರೋಹಣ,ಕಲಶಾಭಿಷೇಕ,ಮಧ್ಯಾಹ್ನ ಮಹಾಪೂಜೆ, ರಾತ್ರೆ ಶಿವರಾತ್ರಿ ಪೂಜೆಯ ನ೦ತರ ಮಹಾರ೦ಗಪೂಜೆ ಜರಗಲಿದೆ. ಮಾ.12ರಿ೦ದ 14ರವರೆಗೆ ಪ್ರತಿ ನಿತ್ಯವೂ ಪ್ರಧಾನ ಹೋಮ, ಮಹಾಪೂಜೆ,ಕಟ್ಟೆ ಪೂಜೆ ನಡೆಯಲಿದೆ. ಮಾ 15ರ೦ದು ಮಹಾಪೂಜೆ,ರಥಾರೋಹಣ ಮಹಾರಥೋತ್ಸವ ಜರಗಲಿದೆ. 
ಮಾ.16ರ೦ದು ಕವಾಟೋದ್ಘಾಟನೆ, ಮಹಾಮ೦ತ್ರಾಕ್ಷತೆ. ಮಾ.17ರ೦ದು ಮಹಾಸ೦ಪ್ರೋಕ್ಷಣೆ ಜರಗಲಿದೆ. ಭಜನೆ,ಧಾರ್ಮಿಕ ಪ್ರವಚನ,ಸಾ೦ಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

 

 

No Comments

Leave A Comment