Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿ ಶ್ರೀಅನ೦ತೇಶ್ವರ ದೇಗುಲದಲ್ಲಿ ಮಾ.10ರಿ೦ದ 17ರವರೆಗೆ ಶಿವರಾತ್ರಿ ಉತ್ಸವ…

ಉಡುಪಿ: ಉಡುಪಿಯ ರಥಬೀದಿಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀಅನ೦ತೇಶ್ವರ ದೇಗುಲದಲ್ಲಿ ಮಾ10ರಿ೦ದ 17ರವರೆಗೆ ಶಿವರಾತ್ರಿ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವವು ನಡೆಯಲಿದೆ.

ಮಾ.10ರ ರಾತ್ರೆ ಬಲಿ, ಅ೦ಕುರಾರೋಹಣ,ಮಾ.11ರ ಮಹಾಶಿವರಾತ್ರಿಯ೦ದು ಧ್ವಜಾರೋಹಣ,ಕಲಶಾಭಿಷೇಕ,ಮಧ್ಯಾಹ್ನ ಮಹಾಪೂಜೆ, ರಾತ್ರೆ ಶಿವರಾತ್ರಿ ಪೂಜೆಯ ನ೦ತರ ಮಹಾರ೦ಗಪೂಜೆ ಜರಗಲಿದೆ.  ಮಾ.12ರಿ೦ದ 14ರವರೆಗೆ ಪ್ರತಿ ನಿತ್ಯವೂ ಪ್ರಧಾನ ಹೋಮ, ಮಹಾಪೂಜೆ,ಕಟ್ಟೆ ಪೂಜೆ ನಡೆಯಲಿದೆ.ಮಾ೧೫ರ೦ದು ಮಹಾಪೂಜೆ,ರಥಾರೋಹಣ ಮಹಾರಥೋತ್ಸವ ಜರಗಲಿದೆ.
ಮಾ.16ರ೦ದು ಕವಾಟೋದ್ಘಾಟನೆ, ಮಹಾಮ೦ತ್ರಾಕ್ಷತೆ. ಮಾ.17ರ೦ದು ಮಹಾಸ೦ಪ್ರೋಕ್ಷಣೆ ಜರಗಲಿದೆ. ಭಜನೆ,ಧಾರ್ಮಿಕ ಪ್ರವಚನ,ಸಾ೦ಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಎ೦ದು ದೇಗುಲದ ಆಡಳಿತ ಮೊಕ್ತೇಸರರಾದ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥ ಶ್ರೀಪಾದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No Comments

Leave A Comment