ರಾಯಚೂರು: ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ! ರಾಯಚೂರು: ನಿನ್ನೆ ಮಧ್ಯಾಹ್ನದಿಂದ ಕಾಣೆಯಾಗಿದ್ದ ಮಾನ್ವಿ ಕ್ಷೇತ್ರದ ಮಾಜಿ ಶಾಸಕ ಹಂಪಯ್ಯ ನಾಯಕ್ ಅವರ ಇಬ್ಬರು ಮೊಮ್ಮಕ್ಕಳ ಶವ ಹಳ್ಳವೊಂದರಲ್ಲಿ ಪತ್ತೆಯಾಗಿದೆ. ಮೃತರನ್ನು ಹಂಪಯ್ಯ ನಾಯಕ್ ಕಡೆಯ ಪುತ್ರರಾದ ಶಿವಾನಂದ ಅವರ ಮಕ್ಕಳಾದ ವರುಣ್ (9) ಹಾಗೂ ಸಣ್ಣಯ್ಯ (5) ಎಂದು ಗುರುತಿಸಲಾಗಿದೆ. ಮನೆ ಹೊರಗೆ ಆಟವಾಡುತ್ತಿದ್ದ ಈ ಬಾಲಕರು ನಿನ್ನೆ ಮಧ್ಯಾಹ್ನ ಎರಡು ಗಂಟೆಯಿಂದ ನಾಪತ್ತೆಯಾಗಿದ್ದರು. ಹಳ್ಳಕ್ಕೆ ಸ್ನಾನ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದ್ದು ಸ್ಥಳಕ್ಕೆ ಸಿರವಾರ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. Share this:TweetWhatsAppEmailPrintTelegram