Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ರೋಮ್ ರೆಸ್ಲಿಂಗ್: ಎರಡನೇ ಬಾರಿ ಚಿನ್ನದ ಪದಕ ಗೆದ್ದ ವಿನೇಶ್ ಫೋಗಟ್!

ಚೆನ್ನೈ: ರೋಂನಲ್ಲಿ ಮುಗಿದಿರುವ ಮ್ಯಾಟಿಯೊ ಪೆಲಿಕೋನ್ ಶ್ರೇಯಾಂಕ ಸರಣಿಯಲ್ಲಿ ಕೆನಡಾದ ಡಯಾನ ಮೇರಿ ಹೆಲೆನ್ ವೈಕರ್ ಅವರನ್ನು 53ಕೆಜಿ ಚಿನ್ನ ವಿಭಾಗದಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಸೋಲಿಸಿದ್ದಾರೆ.

ಒಂದೇ ವಾರದಲ್ಲಿ ವಿನೇಶ್ ಅವರ ಎರಡನೇ ಚಿನ್ನದ ಪದಕದ ಗೆಲುವು ಇದಾಗಿದ್ದು, ಕಳೆದ ಭಾನುವಾರ ಉಕ್ರೇನ್ ನ ಕುಸ್ತಿಪಟು ಮೆಮೋರಿಯಲ್ ಅವರನ್ನು ಕೈವ್ ನಲ್ಲಿ ಸೋಲಿಸಿದ್ದರು. ಇದಕ್ಕೂ ಮುನ್ನ, ಸರಿತಾ ಮೊರ್ 57 ಕೆಜಿ ಬೆಳ್ಳಿ ಮತ್ತು ಗ್ರೀಕೋ-ರೋಮನ್ ಕುಸ್ತಿಪಟು ಕುಲದೀಪ್ ಮಲಿಕ್ 72 ಕೆಜಿಯಲ್ಲಿ ಕಂಚು ಪಡೆದರು.

ಗ್ರೀಕೋ-ರೋಮನ್ ವಿಭಾಗದಲ್ಲಿ ಭಾರತ ಕಳೆದ ಶುಕ್ರವಾರ ಮೂರು ಕಂಚಿನ ಪದಕಗಳನ್ನು ಗಳಿಸಿತ್ತು. ಟೋಕಿಯೊ ಒಲಿಂಪಿಕ್ಸ್‌ಗೆ ಇದುವರೆಗೆ ಅರ್ಹತೆ ಪಡೆದ ದೇಶದ ಏಕೈಕ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಆಗಿದ್ದು, ನಮ್ಮ ದೇಶದವರೇ ಆದ ನಂದಿನಿ ಸಲೋಖೆ ವಿರುದ್ಧ 4-0 ಅಂತರದಿಂದ ಜಯಗಳಿಸಿದರು.

No Comments

Leave A Comment