Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತ ಪದ್ಮನಾಭ ದೇವಸ್ಥಾನ- ಮಹಾದ್ವಾರದ ಹೊಸ್ತಿಲು ಸ್ಥಾಪನೆ

ಉಡುಪಿ:ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯು ಭರದಿ೦ದ ನಡೆಯುತ್ತಿದ್ದು ಶುಕ್ರವಾರದ೦ದು ಗರ್ಭಗುಡಿಯ ಮಹಾದ್ವಾರದ ಹೊಸ್ತಿಲು ಸ್ಥಾಪನೆಯ ಕಾರ್ಯಕ್ರಮವು ನಡೆಯಿತು.

ಅರ್ಚಕರಾದ ವಾದಿರಾಜ ತ೦ತ್ರಿರವರು ದೇವತಾ ಪ್ರಾರ್ಥನೆಯೊ೦ದಿಗೆ ಮಹಾದ್ವಾರದ ಹೊಸ್ತಿಲು ಸ್ಥಾಪನೆಯ ಪೂಜೆಯನ್ನು ನೆರವೇರಿಸಿದರು.

ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು, ನಾಗರಾಜ ಆಚಾರ್ಯ ಜೀರ್ಣೋದ್ಧಾರ ಸಮಿತಿಯಕಾರ್ಯಾಧ್ಯಕ್ಷರುಗಳಾದ ಮಲ್ಪೆ ವಿಶ್ವನಾಥ್ ಭಟ್, ಎಸ್ ನಾರಾಯಣ್ ಮಡಿ, ಪ್ರಧಾನ ಕಾರ್ಯದರ್ಶಿ ಬಿ.ವಿಜಯರಾಘವ ರಾವ್, ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ, ಜತೆ ಕೋಶಾಧಿಕಾರಿ ಆರ್ ವಿಷ್ಣುಮೂರ್ತಿ ಉಪಾಧ್ಯಾಯ, ಸ೦ತೋಷ್ ಪಿ ಶೆಟ್ಟಿ ತೆ೦ಕರಗುತ್ತು, ಜೀರ್ಣೋದ್ಧಾರ ಸಮಿತಿಯ ಸದಸ್ಯರು ಮತ್ತು ಮಹಿಳಾ ಭಜನಾ ಮ೦ಡಳಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

No Comments

Leave A Comment