Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಹಳೆವಿದ್ಯಾರ್ಥಿಗಳಿಂದ ಪುತ್ತಿಗೆಶ್ರೀಗಳಿಗೆ ಒಂದು ಕಾಲು ಕೋಟಿ ರೂಪಾಯಿ ವಾಹನ ಸಮರ್ಪಣೆ

ಉಡುಪಿ ಶ್ರೀಪುತ್ತಿಗೆ ಮಠದ ವಿದೇಶೀ ಶಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಪುತ್ತಿಗೆ ವಿದ್ಯಾಪೀಠದ ಹಳೆವಿದ್ಯಾರ್ಥಿಗಳಿಂದ ಶ್ರೀ ಶ್ರೀಗಳವರ ಷಷ್ಟ್ಯಬ್ಧಿ ಪ್ರಯುಕ್ತ ವಿಶೇಷವಾದ, ಸರ್ವಸಜ್ಜಿತವಾದ, ಒಂದು ಕಾಲು ಕೋಟಿ ರೂಪಾಯಿ ವೆಚ್ಚದ ವಾಹನವೊಂದನ್ನು ಇಂದು ಶ್ರೀಗಳಿಗೆ ಸಮರ್ಪಿಸಲಾಯಿತು.

ಇದೇ ಸಂದರ್ಭದಲ್ಲಿ ಶ್ರೀ ಭೀಮನಕಟ್ಟೆ ಮಠಾಧೀಶರಾದ ಕೀರ್ತಿಶೇಷ ಶ್ರೀ ರಘುಮಾನ್ಯತೀರ್ಥರು ನಡೆಸಿದ್ದ ಮೂವತ್ತೆರಡು ಲಕ್ಷ ಲಕ್ಷ್ಮೀನರಸಿಂಹ ಮಂತ್ರಜಪದ ಅಂಗವಾಗಿ ಹೋಮಗಳನ್ನು ಶ್ರೀಪುತ್ತಿಗೆ ನರಸಿಂಹದೇವರ ಸನ್ನಿಧಾನದಲ್ಲಿ ಅರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀಪಾದಂಗಳವರು ಮಾತನಾಡಿ, ಹಳೆವಿದ್ಯಾರ್ಥಿಗಳ ಸೇವೆಯನ್ನು ಅಭಿನಂದಿಸುತ್ತಾ, “ಮುಂದಿನ ತಮ್ಮ ನಾಲ್ಕನೇ ಪರ್ಯಾಯದ ನಿಮಿತ್ತವಾಗಿ ನೀಡಿದಂತಹ ವಾಹನವು ಶ್ರೀವಿಠ್ಠಲದೇವರ ರಥೋತ್ಸವದಂತೆ ಆಗಲಿ” ಎಂಬುದಾಗಿ ಹಾರೈಸಿ, ಎಲ್ಲಾ ವಿದ್ಯಾರ್ಥಿಗಳಿಗೆ, ದಾನಿಗಳಿಗೆ ಶುಭವನ್ನು ಹಾರೈಸಿದರು.

No Comments

Leave A Comment