Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಸೆಕ್ಸ್ ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ರಾಜಿನಾಮೆ ಅಂಗೀಕರಿಸಿದ ಸಿಎಂ ಬಿಎಸ್ ವೈ/K’taka minister in alleged ‘sex CD sting’ resigns

ಬೆಂಗಳೂರು: ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಮೇಶ್ ಜಾರಕಿಹೊಳಿ ಸಲ್ಲಿಸಿದ್ದ ರಾಜೀನಾಮೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಸೆಕ್ಸ್ ಸಿಡಿ ಬಯಲಿಗೆ ಬಂದ ಬೆನ್ನಲ್ಲೇ ಅಜ್ಞಾತ ಸ್ಖಳಕ್ಕೆ ಹೋಗಿರುವ ರಮೇಶ್ ಜಾರಕಿಹೊಳಿ ಅವರು, ಇಂದು ಸಾಕಷ್ಟು ಚರ್ಚೆಗಳು ರಾಜಕೀಯ ಪ್ರಹಸನದ ಬಳಿಕ ರಾಜಿನಾಮೆ ನೀಡಿದ್ದರು. ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ರಮೇಶ್ ಜಾರಕಿಹೊಳಿ ರಾಜಿನಾಮೆ ಪತ್ರ ರವಾನಿಸಿದ್ದು, ಈ ಘಟನೆಯಿಂದ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಒಂದೇ ಒಂದು ಕಾರಣದಿಂದಾಗಿ ನನ್ನ ಸ್ಥಾನಕ್ಕೆ ರಾಜಿನಾಮೆ ಸಲ್ಲಿಕೆ ಮಾಡಿದ್ದೇನೆ. ಈ ಪ್ರಕರಣದ ಕುರಿತು ಕೂಲಂಕುಷ ತನಿಖೆಯಾಗಬೇಕಿದ್ದು, ತನಿಖೆ ಬಳಿಕ ನಾನು ನಿರ್ದೋಷಿ ಎಂದು ಬಹಿರಂಗವಾದ ಬಳಿಕ ಮತ್ತೆ ನನ್ನ ಸ್ಥಾನ ಪಡೆಯುತ್ತೇನೆ ಎಂದು ಹೇಳಿದ್ದಾರೆ ಎಂದು ವರದಿಯಾಗಿತ್ತು.

ಈದೀಗ ಈ ರಾಜಿನಾಮೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಂಗೀಕರಿಸಿದ್ದು, ರಾಜ್ಯಪಾಲರ ಅನುಮೋದನೆಗಾಗಿ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. 

100%Karnataka Water Resources Minister Ramesh Jarkiholi has resigned from the BS Yediyurappa government following allegations of sexual harassment. Jarkiholi has sent his resignation letter to the chief minister.

Purported video clips showing Ramesh Jarkiholi getting intimate with an unidentified woman, were widely aired by Kannada television news channels.
The allegation, just ahead of the Budget session of the state legislature starting from Thursday, has come as a huge embarrassment to B S Yediyurappa-led BJP government.
Ramesh Jarkiholi, a MLA from Gokak, who was earlier with the Congress, was among the chief architects of the downfall of the Congress-JD-S coalition government that eventually paved the way for the BJP to come to power.
No Comments

Leave A Comment