Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಮಂಗಳೂರು ವಿಮಾನ ನಿಲ್ದಾಣದಲ್ಲಿ 16.5 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನ ವಶ, ಓರ್ವನ ಬಂಧನ

ಮಂಗಳುರು: ಮಾರ್ಚ್ 2 ರ ಮಂಗಳವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಟ್ರಾಲಿ ಬ್ಯಾಗ್ ‌ಗಳಲ್ಲಿ ಮುಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ 350 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧ ಮುರುಡೇಶ್ವರ ಮೂಲದ ಮೊಹಮ್ಮದ್ ಅವಾನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈತ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದ.

ವಶಪಡಿಸಿಕೊಳ್ಳಲಾದ ಚಿನ್ನದ ಮೌಲ್ಯ 16,52,000 ರೂ. ಎಂದು ಹೇಳಲಾಗಿದೆ. ಉಪ ಆಯುಕ್ತ ಡಾ.ಕಪಿಲ್ ಗಡೆ ಐಆರ್ಎಸ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಅಧಿಕಾರಿಗಳಾದ ನಾಗೇಶ್ ಕುಮಾರ್, ಅಧೀಕ್ಷಕರು, ಸುಬೇಂದು ಬೆಹ್ರಾ ಮತ್ತು ನವೀನ್ ತಂಡದಲ್ಲಿದ್ದರು.

No Comments

Leave A Comment