Log In
BREAKING NEWS >
ಯಶಸ್ವಿಯಾಗಿ ಮುಗಿದ ಎಸ್ಎಸ್ಎಲ್ ಸಿ ಪರೀಕ್ಷೆ: ಆಗಸ್ಟ್ 10 ರಂದು ಫಲಿತಾಂಶ.....ಆಗಸ್ಟ್‌ 29ರಂದು ಆಯೋಧ್ಯೆಯ ರಾಮ ಲಲ್ಲಾಗೆ ರಾಷ್ಟ್ರಪತಿಗಳಿಂದ ಪೂಜೆ...

ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಅಧ್ಯಕ್ಷೆಯಾಗಿ ಸಿಎ. ಕವಿತ ಎಮ್ ಪೈ ಟಿ

ಉಡುಪಿ: ಭಾರತೀಯ ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ಅವರು 2021-22 ನೇ ಸಾಲಿಗೆ 20ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಈ ಮೊದಲು ಸಿಎ. ಕವಿತ ಎಮ್ ಪೈ ಟಿ ಅವರು ಸಂಸ್ಥೆಯ ಉಪಾಧ್ಯಕ್ಷೆ, ಕಾರ್ಯದರ್ಶಿಯಾಗಿ ಖಜಾಂಚಿ, ಸಿಕಾಸಾ ಅಧ್ಯಕ್ಷೆಯಾಗಿ ಮುಂತಾದ ಹುದ್ದೆಗಳನ್ನು ನಿರ್ವಹಿಸಿರುತ್ತಾರೆ.
ಉಪಾಧ್ಯಕ್ಷರಾಗಿ ಸಿಎ. ಲೋಕೇಶ್ ಶೆಟ್ಟಿ,, ಕಾರ್ಯದರ್ಶಿಯಾಗಿ ಸಿಎ. ಪ್ರದೀಪ್ ಜೋಗಿ, ಖಜಾಂಚಿಯಾಗಿ ಸಿಎ. ಪ್ರಭಾಕರ್ ಎನ್ ನಾಯಕ್, ಸಿಕಾಸಾ ಅಧ್ಯಕ್ಷರಾಗಿ ಸಿಎ. ನರಸಿಂಹ ನಾಯಕ್ ಅವರು ಆಯ್ಕೆಯಾಗಿದ್ದಾರೆ.

No Comments

Leave A Comment