ಡ್ರಗ್ಸ್ ಪ್ರಕರಣ: ಬಂಗಾಳ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಅರೆಸ್ಟ್
ಕೋಲ್ಕತ್ತಾ: ಡ್ರಗ್ಸ್ ಪ್ರಕರಣಕ್ಕೆ ಸಾಂಬಂಧಿಸಿದಂತೆ ಪಶ್ಚಿಮ ಬಮ್ಗಾಳ ಬಿಜೆಪಿ ನಾಯಕ ರಾಕೇಶ್ ಸಿಂಗ್ ಅವರನ್ನು ಕೋಲ್ಕತ್ತಾ ಪೋಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಕೊಕೇನ್ ಸಾಗಿಸುತ್ತಿದ್ದ ವೇಳೆ ಬಂಧಿಸಲಾಗಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ವಿಚಾರಣೆ ವೇಳೆ ರಾಕೇಶ್ ಸಿಂಗ್ ಹೆಸರು ಬಹಿರಂಗಪಡಿಸಿದ್ದರು.
ನನ್ನನ್ನು ಸಿಲುಕಿಸಲು ಷಡ್ಯಂತ್ರ ರೂಪಿಸಲಾಗಿದೆ, ಇದೆಲ್ಲಾ ಸಿಂಗ್ ಕೈವಾಡವೆಂದು ಗೋಸ್ವಾಮಿ ಹೇಳಿದ್ದರು. ಇದಾದ ನಂತರ ಪೋಲೀಸರು ಬರ್ದ್ವಾನ್ ನಲ್ಲಿ ರಾಕೇಶ್ ಸಿಂಗ್ ಅವರನ್ನು ಬಂಧಿಸಿದ್ದಾರೆ.
ಇನ್ನು ಡ್ರಗ್ಸ್ ಪ್ರಕರಣದಲ್ಲಿ ತಮ್ಮ ಪಾತ್ರವಿದೆ ಎನ್ನುವ ಬಗ್ಗೆ ವಿಚಾರಣೆಗೆ ಪೋಲೀಸರು ನೋಟೀಸ್ ನೀಡಿದ್ದನ್ನು ಪ್ರಶ್ನಿಸಿ ರಾಕೇಶ್ ಸಿಂಗ್ ಕೋಲ್ಕತ್ತಾ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು ಆ ಅರ್ಜಿ ವಜಾ ಆಗಿತ್ತು. ಸಿಂಗ್ ಪರ ವಕೀಲರು ತಮ್ಮ ಕಕ್ಷಿದಾರರು ಬಿಜೆಪಿ ಸೇರಿದ ಮೇಲೆ ಅವರ ವಿರುದ್ಧ 26 ಪ್ರಕರಣಗಳು ದಾಖಲಾಗಿದೆ, ಇದೊಂದು ರಾಜಕೀಯ ಷಡ್ಯಂತ್ರ ಎಂದು ಹೇಳಿದ್ದಾರೆ.