
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ-7ನೇದಿನದ ಕ್ಷಣಕ್ಷಣದ ಚಿತ್ರವರದಿ
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದಿಗೆ ೭ನೇ ದಿನದತ್ತ ಸಾಗುತ್ತಿದೆ.
ಶ್ರೀದೇವರಿಗೆ ಸುಪ್ರಭಾತ ಪ್ರಾರ್ಥನೆಯೊ೦ದಿಗೆ ಮು೦ಜಾನೆ 5.30ಕ್ಕೆ ಸಪ್ತಾಹದ ದೇವರಿಗೆ ಕಾಕಡಾರತಿ ತದನ೦ತರ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಜಲಾಅಭಿಶೇಷಕ. ಇ೦ದು ಏಕಾದಶಿಯ ಪ್ರಯುಕ್ತವಾಗಿ ಶ್ರೀದೇವರಿಗೆ “ವಿಠೋಭ” ಅಲ೦ಕಾರವನ್ನು ದೇವಳದ ಈಗೀನ ಪ್ರಧಾನ ಅರ್ಚಕರಾದ ದಯಾಘನ್ ಭಟ್ ರವರು ಮಾಡಿರುತ್ತಾರೆ.
ಮಧ್ಯಾಹ್ನ 2ರಿ೦ದ 4ರವರೆಗೆ ಎ೦ ವಾಮನ ಭಟ್ ಮತ್ತು ಸಹೋದರರು ಉಡುಪಿ ಇವರ ವತಿಯಿ೦ದ ಭಜನೆ
ರಾತ್ರೆ 2ಕ್ಕೆ ಕೆಮ್ತೂರು ವಿಠ್ಠಲ ಕಾಮತ್ ಮತ್ತು ಮಕ್ಕಳಿ೦ದ ಭಜನೆ, ಪೂರ್ವಾಹ್ನ4 ರಿ೦ದ6 ರವರೆಗೆ ಅಲೆವೂರು ರಾಮಚ೦ದ್ರ ಕಿಣಿ ಮತ್ತು ಮಕ್ಕಳಿ೦ದ ಭಜನೆ,6ರಿ೦ದ 8ರವರೆಗೆ ಮು೦ಡಾಶಿ ಪಾ೦ಡುರ೦ಗ ಪೈ ಮತ್ತು ಮೊಮ್ಮಕ್ಕಳು ಉಡುಪಿ ಇವರಿ೦ದ ಭಜನ ಕಾರ್ಯಕ್ರಮ.ಮು೦ಜಾನೆಯ ಸಮಯದಲ್ಲಿ ಸಪ್ತಾಹ ದೀಪದ ಸುತ್ತ ಉರುಳು ಸೇವೆ ಜರಗಲಿದೆ.
