Log In
BREAKING NEWS >
ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ....

ಬೆಂಗಳೂರು: ಮೂರು ಗಂಟೆಗಳಲ್ಲಿ ಆರು ಸರಗಳ್ಳತನ ನಡೆಸಿದ್ದ ಗ್ಯಾಂಗ್ ಸೆರೆ, 11 ಲಕ್ಷ ಮೌಲ್ಯದ ಸ್ವತ್ತು ವಶ

ಬೆಂಗಳೂರು: ಮೂರು ಗಂಟೆಗಳಲ್ಲಿ ಆರು ಕಡೆ ಸರಗಳ್ಳತನ ನಡೆಸಿದ ಆರು ಜನರ ಗ್ಯಾಂಗ್ ಅನ್ನು ಈಶಾನ್ಯ ವಿಭಾಗ ಪೊಲೀಸರು ಬಂಧಿಸಿದ್ದಾರೆ, ಅವರಿಂದ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳನ್ನು ದೆಹಲಿ ಮೂಲದವರಾದ ಸುರೇಶ್ ಕುಮಾರ್ ಅಲಿಯಾಸ್ ಸುಭಾಷ್ (32), ಹಸೀನ್ ಖಾನ್ ಅಲಿಯಾಸ್ ಫೌಜಿ (23), ಇರ್ಷಾದ್ (24), ಸಲೀಮ್ (22), ಅಫ್ರೋಜ್ ಅಲಿಯಾಸ್ ಶಹೀದ್ (25) ಮತ್ತು ಕೇರಳದ ವೈನಾಡ್ ಮೂಲದ ಹ್ಯಾರಿಸ್ ಪಿಕೆ (37) ಎಂದು ಗುರುತಿಸಲಾಗಿದೆ.

ಫೆಬ್ರವರಿ 16 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ನಡೆದ ಸರಣಿ ಸರಗಳ್ಳತನ ಪ್ರಕರಣದಲ್ಲಿ ಇವರು ಆರೋಪಿಗಳಾಗಿದ್ದಾರೆ.ಬಾಗಲೂರು ಮತ್ತು ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಎರಡು ಪ್ರಕರಣಗಳು ವರದಿಯಾಗಿದ್ದು, ದೇವನಹಳ್ಳಿ ಮತ್ತು ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಎರಡು ಪ್ರಕರಣಗಳು ವರದಿಯಾಗಿವೆ. “ಪ್ರಕರಣವನ್ನು ಭೇದಿಸಲು ವಿಶೇಷ ತಂಡವನ್ನು ರಚಿಸಲಾಗಿತ್ತು.ಆರೋಪಿಗಳು ಕಪ್ಪು ಪಲ್ಸರ್ ಬೈಕು ಬಳಸಿದ್ದಾರೆ ಎಂಬ ಮಾಹಿತಿಯನ್ನು ಸಂತ್ರಸ್ತರಿಂದ ಪಡೆಯಲಾಗಿತ್ತು.ಆದಾಗ್ಯೂ, ವಿವಿಧ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬೈಕ್‌ನ ನಂಬರ್ ಪ್ಲೇಟ್ ಗೋಚರಿಸಲಿಲ್ಲ. ಗುರುವಾರ ಪೊಲೀಸ್ ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಸಾದಹಳ್ಳಿ ಗೇಟ್ ಬಳಿಯ ಹೋಟೆಲ್‌ಗೆ ತೆರಳಿದ್ದಾಗ ಆರು ಮಂದಿ ಆರೋಪಿಗಳು ಅಲ್ಲಿಗೆ ಊಟಕ್ಕೆ ಬಂದಿದ್ದಾರೆ.ಸರಗಳ್ಳತನವಾಗಿದ್ದ ಮನೆಯವರು ಒದಗಿಸಿದ ವಿವರಣೆಯ ಆಧಾರದ ಮೇಲೆ ಮತ್ತು ಸಿಸಿಟಿವಿ ದೃಶ್ಯಾವಳಿಗಳಲ್ಲಿ ನೋಡಿ ಪೋಲೀಸರು ಆರೋಪಿಗಳನ್ನು ಪರಿಶೀಲಿಸಿದಾಗ  ಅವರ ಬಳಿ ಆರು ಚಿನ್ನದ ಸರಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

“ಆರೋಪಿ ಹ್ಯಾರಿಸ್ ದೇವನಹಳ್ಳಿಯ ಕಣ್ಣಮಂಗಲದಲ್ಲಿ ಆಲೂಗೆಡ್ಡೆ ಚಿಪ್ಸ್ ಅಂಗಡಿಯೊಂದನ್ನು ನಡೆಸುತ್ತಿದ್ದಾನೆ ಮತ್ತು ತನ್ನ ಸಹವರ್ತಿ ಸುರೇಶ್ ಕುಮಾರ್ ನನ್ನು ಬೆಂಗಳೂರಿಗೆ ಬರುವಂತೆ ಕೇಳಿದ್ದಾನೆ ಎಂದು  ತನಿಖೆಯಿಂದ ತಿಳಿದುಬಂದಿದೆ. ಫೆಬ್ರವರಿ 1 ರಂದು ಆತ  ಒಬ್ಬನೇ ಬಂದಿದ್ದ ಮತ್ತು ಅಪರಾಧ ಕೃತ್ಯ ನಡೆಸಲು ಸ್ಥಳಗಳನ್ನು ಗುರುತಿಸಿ ದೆಹಲಿಗೆ ಮರಳಿದ್ದ. ಅದಾಗಿ ಫೆಬ್ರವರಿ 14 ರಂದು ಆತ ತನ್ನ ಸಹಚರರೊಂದಿಗೆ ಬಂದಿದ್ದ. ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯ ಉತ್ತನಹಳ್ಳಿಯಲ್ಲಿ ಪಲ್ಸರ್ ಬೈಕ್ ಕದ್ದಿದ್ದಾರೆ. ಒಂದೇ ಬೈಕ್ ಬಳಸಿ, ಅವರು ಆರು ಸರಗಳ ಕಳವು ಮಾಡಿದ್ದಾರೆ.”ಎಂದು ಪೊಲೀಸರು ತಿಳಿಸಿದ್ದಾರೆ, ಸುರೇಶ್ ಕುಮಾರ್ ಮತ್ತು ಸಲೀಮ್ ಅವರುಗಳ ವಿರುದ್ಧ ದ್ಧ ಕ್ರಮವಾಗಿ 24 ಮತ್ತು 21 ಪ್ರಕರಣಗಳಿವೆ.

No Comments

Leave A Comment