ಬೆಂಗಳೂರು: ಗೆಳತಿಯ ಮನೆಯಲ್ಲಿ ಕಳ್ಳತನ ನಡೆಸಿದ್ದ ಖತರ್ ನಾಕ್ ದರೋಡೆಗೋರರ ಬಂಧನ, 1 ಕೋಟಿ.ಮೌಲ್ಯದ ನಗ ನಗದು ವಶ
ಬೆಂಗಳೂರು: ಗೆಳತಿಯ ಮನೆಯಲ್ಲಿ ಕಳ್ಳತನ ಎಸಗಿದ ಇಬ್ಬರು ವ್ಯಕ್ತಿಗಳನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ ಅವರು ಗೆಳತಿಯ ಮನೆಯಿಂದ . 1 ಕೋಟಿ. ಮೌಲ್ಯದ ಅಮೂಲ್ಯ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಆರೋಪಿ ಸಾಕ್ಷ್ಯ ನಾಶ ಮಾಡಲು ಮನೆಯಲ್ಲಿ ಮೆಣಸಿನ ಪುಡಿ ಚೆಲ್ಲಿದ್ದನು.ಮತ್ತು ಪೊಲೀಸರು ಆತನನ್ನು ಪತ್ತೆಹಚ್ಚಲು ಸಾಧ್ಯವಾಗದಂತೆ ಹಲವಾರು ಆಟೋರಿಕ್ಷಾಗಳನ್ನು ಬದಲಾಯಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಲಕ್ಕನ್ಸಂದ್ರ ನಿವಾಸಿ ನಜೀಮ್ ಶರೀಫ್ ಅಲಿಯಾಸ್ ಶಹೀದ್ (41) ಮತ್ತು ಸುದಗುಂಟೇಪಾಳ್ಯ ಬಳಿಯ ನ್ಯೂ ಗುರಪ್ಪನಪಾಳ್ಯ ನಿವಾಸಿ ಮೊಹಮ್ಮದ್ ಶಫಿಯುಲ್ಲಾ (42) ಎಂದು ಗುರುತಿಸಲಾಗಿದೆ.
ನಜೀಮ್ ಶರೀಫ್ ಸ್ನೇಹಿತೆಯಾಗಿದ್ದ ಖಾಸಗಿ ಕಂಪನಿಯ ಉದ್ಯೋಗಿ 28 ವರ್ಷದ ಜ್ಯೋತಿ ಜ್ವಾಲಾ ಅವರ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 13 ರ ಮಧ್ಯಾಹ್ನ ಕಳ್ಳತನ ನಡೆದ ಕಾಕ್ಸ್ ಟೌನ್ನ ಎಂಎಂ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಆಕೆ ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದಳು. ಜ್ಯೋತಿ ತನ್ನ ಸಹೋದರ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಹೋಗಿದ್ದಳು ಮತ್ತು ಅವಳು ಮನೆಗೆ ಹಿಂದಿರುಗಿದಾಗ ಘಟನೆ ಬೆಳಕಿಗೆ ಬಂದಿದೆ.
“ಪೊಲೀಸರು ಯಾವುದೇ ಸುಳಿವು ಪಡೆಯಲು ಸಾಧ್ಯವಾಗದಂತೆ ಮಾಡಲು ಆರೋಪಿಗಳು ಮನೆಯಲ್ಲೆಲ್ಲಾ ಮೆಣಸಿನ ಪುಡಿಯನ್ನು ಚೆಲ್ಲಿದರು. ಅಪಾರ್ಟ್ ಮೆಂಟಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸುರಕ್ಷಿತ ಲಾಕರ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದ ಆರೋಪಿ ವಾಹನದಲ್ಲಿ ಪರಾರಿಯಾಗಿರುವುದು ಸೆರೆಯಾಗಿದೆ. ಘಟನಾ ಸ್ಥಳದ ಸುತ್ತ ಮುತ್ತ ಸ್ಥಾಪಿಸಲಾಗಿದ್ದ ವಿವಿಧ ಕಣ್ಗಾವಲು ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ವಿಶ್ಲೇಷಿಸುವ ಮೂಲಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. “ಈ ಪ್ರಕ್ರಿಯೆಯು 15-20 ದಿನಗಳನ್ನು ತೆಗೆದುಕೊಂಡಿತು ಮತ್ತು ಅವರು ಉಳ್ಳೂರು ಕೆರೆಯ ಬಳಿ ದೂರುದಾರರ ವಾಹನ ಬಿಟ್ಟುಹೋಗಿರುವುದು ಕಂಡುಬಂದಿದೆ, ಅಲ್ಲಿಂದ ಅವರು ಆಟೋರಿಕ್ಷಾ ಬಾಡಿಗೆಗೆ ಪಡೆದಿದ್ದಾರೆ. ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಅವರು ಎಂಜಿ ರಸ್ತೆ, ಹೊಸೂರು ರಸ್ತೆ ಮತ್ತು ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ರಿಕ್ಷಾಗಳನ್ನು ಬದಲಾಯಿಸಿದರು. ಅವರು ಕೊನೆಯ ಬಾರಿಗೆ ಲಕ್ಕಸಂದ್ರ 3 ನೇ ಕ್ರಾಸ್ ವರೆಗೆ ತಲುಪಿದ್ದಾರೆ. ಆ ಹಂತದ ನಂತರ ಯಾವುದೇ ದೃಶ್ಯ ಸಿಕ್ಕಿಲ್ಲ.ಮಾಹಿತಿದಾರರ ಮೂಲಕ, ಅಂತಿಮವಾಗಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಯಿತು, ”ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಮೊದಲು ಶಫಿಯುಲ್ಲಾನನ್ನು ಪತ್ತೆ ಮಾಡಿ ಆತ ನೀಡಿದ್ದ ಮಾಹಿತಿಯ ಆಧಾರದ ಮೇಲೆ ಶರೀಫ್ನನ್ನು ಬಂಧಿಸಿದ್ದಾರೆ. “ಶರೀಫ್ ರಿಯಲ್ ಎಸ್ಟೇಟ್ ಕೆಲಸದಲ್ಲಿದ್ದರೆ ಶಫಿಯುಲ್ಲಾ ಗ್ರಾನೈಟ್ ಪೂರೈಕೆ ವ್ಯವಹಾರವನ್ನು ಮಾಡುತ್ತಿದ್ದ. ಅವರಿಬ್ಬರೂ ವ್ಯವಹಾರದಲ್ಲಿ ಭಾರಿ ನಷ್ಟವನ್ನು ಅನುಭವಿಸಿದ್ದರು ಮತ್ತು ಹಣದ ಅಗತ್ಯ ಅವರಿಗಿತ್ತು.ತನಗೆ ಶ್ರೀಮಂತ ಸ್ನೇಹಿತೆ ಇದ್ದಾಳೆ ನಾವೊಂದು ವೇಳೆ ಆಕೆಯ ಮನೆಯಲ್ಲಿ ಕಳವು ಮಾಡಿದರೆ ದೊಡ್ಡ ಮೊತ್ತದ ಹಣ ಸಂಪಾದಿಸಬಹುದು ಎಂದು ಶರೀಫ್ ಶಫಿಯುವಲ್ಲಾ ಗೆ ಹೇಳಿದ್ದ.
ಘಟನೆಗೆ ಕೆಲವು ದಿನಗಳ ಮೊದಲು ತನ್ನ ಸ್ನೇಹಿತೆಯನ್ನು ಬ್ಯೂಟಿ ಪಾರ್ಲರ್ನಲ್ಲಿ ಭೇಟಿಯಾದಾಗ ಶರೀಫ್ ಮನೆಯ ನಕಲಿ ಕೀಲಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದ.”ನಂತರ, ಅವಳ ಸಹೋದರನನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಆರೋಪಿಗಳು ಪರಿಸ್ಥಿತಿಯ ಲಾಭವನ್ನು ಪಡೆದರು, ಅನುಮಾನವನ್ನು ತಪ್ಪಿಸಲು, ಶರೀಫ್ ಆಸ್ಪತ್ರೆಯಲ್ಲಿ ಜ್ವಾಲಾ ಅವರೊಂದಿಗೆ ಇದ್ದ. ಇತ್ತ ಶಫಿಯುಲ್ಲಾ ಆಕೆಯ ಮನೆಯಲ್ಲಿ ಕಳ್ಳತನ ನಡೆಸಿದ್ದಾನೆ.” ಭಾರತೀಯ ಮತ್ತು ವಿದೇಶಿ ಕರೆನ್ಸಿಯನ್ನು ಹೊಂದಿದ್ದ ಸುರಕ್ಷಿತ ಲಾಕರ್ ಅನ್ನು ತೆರೆದಿರುವ ಶರೀಫ್ಗೆ ಶಫಿಯುಲ್ಲಾ ಸಹಕಾರ ನೀಡಿದ್ದ.ಇಬ್ಬರೂ ಕದ್ದ ಹಣವನ್ನು ಹಂಚಿಕೊಂಡಿದ್ದಾರೆ.ನಾವು ರೂ. 37 ಲಕ್ಷ, ವಿದೇಶಿ ಕರೆನ್ಸಿ ರೂ. 12 ಲಕ್ಷ, ಚಿನ್ನಾಭರಣಗಳು, ದುಬಾರಿ ಕೈಗಡಿಯಾರಗಳು, ಒಂದು ಕಾರು ಮತ್ತು ಇತರ ಬೆಲೆಬಾಳುವ ವಸ್ತುಗಳು, ಸಂಪೂರ್ಣವಾಗಿ ಒಂದು ಕೋಟಿ ಮೊತ್ತದ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ.”ಎಂದು ಪೊಲೀಸರು ತಿಳಿಸಿದ್ದಾರೆ..