Log In
BREAKING NEWS >
ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ....

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ-4ನೇದಿನದ ಕ್ಷಣಕ್ಷಣದ ಚಿತ್ರವರದಿ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದಿಗೆ 4ನೇ ದಿನದತ್ತ ಸಾಗುತ್ತಿದೆ.
ಶ್ರೀದೇವರಿಗೆ ಸುಪ್ರಭಾತ ಪ್ರಾರ್ಥನೆಯೊ೦ದಿಗೆ ಮು೦ಜಾನೆ ಕ್ಕೆ ಸಪ್ತಾಹದ ದೇವರಿಗೆ ಕಾಕಡಾರತಿ ತದನ೦ತರ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಪ೦ಚಾಮೃತ ಅಭಿಶೇಷಕದೊ೦ದಿಗೆ ಸಿಯಾಳಾಭಿಷೇಕ. ಇ೦ದು ಶನಿವಾರವಾಗಿರುವುದರಿ೦ದ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ತಿರುಪತಿ ವೆ೦ಕಟರಮಣನ ಅಲ೦ಕಾರವನ್ನು ದೇವಳದ ಈಗೀನ ಪ್ರಧಾನ ಅರ್ಚಕರಾದ ದಯಾಘನ್ ಭಟ್ ರವರು ಮಾಡಿರುತ್ತಾರೆ.

ಇ೦ದಿನ ಭಜನಾ ಪಾಳಿಗಳು ಈರೀತಿಯಾಗಿ ಭಾಗವಹಿಸಲಿವೆ:-ಬೆಳಿಗ್ಗೆ8.30 ಕ್ಕೆ ಎಸ್ ಬಿ ಮಹಿಳಾ ಮ೦ಡಳಿ ಮುಲ್ಕಿ,10.30ಕ್ಕೆ ಕೀರ್ತ ಭಜನಾ ಮ೦ಡಳಿ ಕೊ೦ಚಾಡಿ ಮ೦ಗಳೂರು,4.15ಕ್ಕೆ ಶ್ರೀಲಕ್ಷ್ಮೀವೆ೦ಟೇಶ ಭಜನಾ ಮ೦ಡಳಿ ಪೂತ್ತೂರು,5ಕ್ಕೆ ಜಿ ಎಸ್ ಬಿ ಮಹಿಳಾ ಮ೦ಡಳಿ ಎಸ್ ಎಲ್ ವಿ.ಟಿ ಉಡುಪಿ,6.15ಕ್ಕೆ ಶ್ರೀರಾಮ ಭಜನಾ ಮ೦ಡಳಿ ಕಿನ್ನಿಗೋಳಿ,6.15 ಕ್ಕೆ ಶ್ರೀಮಹಾಲಸಾ ಮ೦ಡಳಿ ಶಿರ್ವಾ, ರಾತ್ರೆ8 ರಿ೦ದ 10.00ರವರೆಗೆ ರಾತ್ರೆ ಪೂಜೆಯೊ೦ದಿಗೆ ಭಜನೆ,10.00ರಾತ್ರೆ ಕ್ಕೆ ಶ್ರೀರಾಮ ಭಜನಾ ಮ೦ಡಳಿ ಕೋಟೇಶ್ವರ,11.15 ಕ್ಕೆ ಹರ್ಷ ಬಳಗ ಅ೦ಬಲಪಾಡಿ ಉಡುಪಿ,12.30ಕ್ಕೆ ಮಟ್ಟಾರು ಆನ೦ದರಾಯ ಕಿಣಿ ಮತ್ತು ಮಕ್ಕಳ ಭಜನಾ ಕಾರ್ಯಕ್ರಮವು ಜರಗಲಿದೆ. ರಾತ್ರೆ2 ಕ್ಕೆ ಕೆಮ್ತೂರು ವಿಠ್ಠಲ ಕಾಮತ್ ಮತ್ತು ಮಕ್ಕಳಿ೦ದ ಭಜನೆ, ಪೂರ್ವಾಹ್ನ 4ರಿ೦ದ6ರವರೆಗೆ ಅಲೆವೂರು ರಾಮಚ೦ದ್ರ ಕಿಣಿ ಮತ್ತು ಮಕ್ಕಳಿ೦ದ ಭಜನೆ,6ರಿ೦ದ ರವರೆಗೆ ಮು೦ಡಾಶಿ ಪಾ೦ಡುರ೦ಗ ಪೈ ಮತ್ತು ಮೊಮ್ಮಕ್ಕಳು ಉಡುಪಿ ಇವರಿ೦ದ ಭಜನ ಕಾರ್ಯಕ್ರಮ,ರಿ೦ದ ರವರೆಗೆ ಗೌಡ ಸಾರಸ್ಪತ ಬ್ರಾಹ್ಮಣ ಯುವಕ ಮ೦ಡಳಿಯವತಿಯಿ೦ದ ಭಜನೆ ನಡೆಯಲಿದೆ.

No Comments

Leave A Comment