Log In
BREAKING NEWS >
ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ....

ಆಟಿಕೆ ಬಾಲ್‍ನಲ್ಲಿ 11 ಲಕ್ಷ ಮೌಲ್ಯದ ಚಿನ್ನದ ಗಟ್ಟಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಮುಂಜಾನೆ ವಿಮಾನದಲ್ಲಿ ಬಿಟ್ಟು ಹೋಗಿದ್ದ ಆಟಿಕೆ ಚೆಂಡಿನೊಳಗೆ ಚಿನ್ನದ ಗಟ್ಟಿಯನ್ನು ಪತ್ತೆ ಮಾಡಿದ್ದಾರೆ. ಚಿನ್ನದ ಮೌಲ್ಯ 11 ಲಕ್ಷ ರೂ.ಗಳಷ್ಟಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇಂಡಿಗೊ ವಿಮಾನದಲ್ಲಿ(6ಇ 096) ಆಟಿಕೆ ಚೆಂಡು ಪತ್ತೆಯಾಗಿದ್ದು, ಮಂಗಳವಾರ(ಫೆಬ್ರವರಿ 16) ರಾತ್ರಿ 11.44ಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಿದೆ. ಚಿನ್ನದ ಗಟ್ಟಿಯನ್ನು ವಿಮಾನದಲ್ಲಿನ ಸಣ್ಣ ಆಟಿಕೆ ಚೆಂಡಿನ ಒಳಗೆ ಇಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಒಂದು ಚಿನ್ನದ ಗಟ್ಟಿ 10 ಗ್ರಾಂ ಚಿನ್ನಕ್ಕೆ ಸಮಾನವಾಗಿರುತ್ತದೆ. ಬಾರ್‌ಗಳ ನಿಖರ ತೂಕ 233.28 ಗ್ರಾಂ ಮತ್ತು ಚಿನ್ನದ ಮೌಲ್ಯ 11,30,241 ರೂ. ಆಗಿದೆ. ಸದ್ಯ ಇದು ತಮ್ಮದು ಎಂದು ಯಾರು ಬಂದಿಲ್ಲ ಎಂದು ಮೂಲವು ತಿಳಿಸಿದೆ.

ಕಳೆದ ಒಂದು ತಿಂಗಳಲ್ಲಿ ದುಬೈನಿಂದ ಚಿನ್ನದ ಕಳ್ಳಸಾಗಣೆ ಹೆಚ್ಚಾಗಿದೆ. ಒಂದು ವಾರದ ಹಿಂದೆ ಕಸ್ಟಮ್ಸ್ ಅಧಿಕಾರಿಗಳು ಫ್ಲೈಯರ್‌ನಿಂದ 62.35 ಲಕ್ಷ ರೂ.ಗಳ 1.31 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಬಂಧಿತನು ತನ್ನ ಸಾಕ್ಸ್ ಮತ್ತು ಗುದನಾಳದಲ್ಲಿ ಕ್ಯಾಪ್ಸುಲ್ಗಳ ಒಳಗೆ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದನು

No Comments

Leave A Comment